

ಕಾಸರಗೋಡು: ಕುಂಬಳೆ ಶಾಂತಿಪಳ್ಳ ನಿವಾಸಿ ದಿ.ವಿಜಯನ್ ಎಂಬುವರ ಪುತ್ರ, ಕೂಲಿ ಕಾರ್ಮಿಕ ವಿನಯ ಕುವಾರ್(44) ಮನೆ ಸನಿಹದ ಮರದ ಕಾರ್ಖಾನೆ ಕೊಠಡಿಯೊಳಗೆ ನೇಣುಬಿಗಿದು ಆತ್ಮಹತ್ಯೆಗೈದಿದ್ದಾರೆ. ಭಾನುವಾರ ರಾತ್ರಿ 10ರ ವೇಳೆಗೆ ಮನೆಯಿಂದ ನಾಪತ್ತೆಯಾಗಿದ್ದು, ಮನೆಯವರು ಕುಂಬಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮನೆಯವರು, ಸ್ನೇಹಿತರು ಹಾಗೂ ಪೊಲೀಸರು ಹುಡುಕಾಟ ನಡೆಸಿದಾಗ ಮನೆಯಿಂದ ಅನತಿ ದೂರದಲ್ಲಿ ಈ ಹಿಂದೆ ಕಾರ್ಯಾಚರಿಸುತ್ತಿದ್ದ ಮರದ ಕಾರ್ಖಾನೆಯ ಕೊಠಡಿಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ತಕ್ಷಣ ಕೆಳಗಿಳಿಸಿ ಕುಂಬಳೆಯ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲಿಲ್ಲ.