ಕೂಲಿಕಾರರು ಮನರೇಗಾ ನಿಯಮ ಪಾಲಿಸಲಿ

08 GVT 01A
ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಪಂನಿಂದ ನರೇಗಾ ಯೋಜನೆಯಡಿ ಕೈಗೊಂಡಿರುವ ಗಡ್ಡಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ಪಿಡಿಒ ಸುರೇಶ ಚಲುವಾದಿ ಪರಿಶೀಲನೆ ನಡೆಸಿದರು. ಕಾರ್ಯದರ್ಶಿ ಈಶಪ್ಪ, ವಿಷಯ ನಿರ್ವಾಹಕರಾದ ಆಂಜನೇಯ, ರುದ್ರಯ್ಯಸ್ವಾಮಿ ಇತರರಿದ್ದರು.
Published on

ಗಂಗಾವತಿ: ನರೇಗಾ ಕೂಲಿಕಾರರು ನಿಗದಿತ ಅವಧಿ ಮತ್ತು ಕೆಲಸ ನಿರ್ವಹಣೆಗೆ ಸಾಮೂಹಿಕವಾಗಿ ಶ್ರಮಿಸಿ ಪೂರ್ಣ ಪ್ರಮಾಣದ 370 ರೂ. ಕೂಲಿ ಪಡೆಯಬೇಕು ಎಂದು ವಡ್ಡರಹಟ್ಟಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ ಛಲವಾದಿ ಹೇಳಿದರು.

ತಾಲೂಕಿನ ವಡ್ಡರಹಟ್ಟಿ ಗ್ರಾಪಂನಿಂದ ನರೇಗಾ ಯೋಜನೆಯಡಿ ಕೈಗೊಂಡಿರುವ ಗಡ್ಡಿ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಶನಿವಾರ ಪರಿಶೀಲನೆ ನಡೆಸಿ ಮಾತನಾಡಿದರು.

ಮನರೇಗಾ ಯೋಜನೆಯ ಮಾರ್ಗಸೂಚಿಯನ್ನು ಕೂಲಿಕಾರರು ಉಲ್ಲಂಘಿಸಬಾರದು.

ಕೆಲಸ ಬಯಸುವ ಕೂಲಿಕರಾರು ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಕೆಲಸಕ್ಕೆ ಹಾಜರಾದವರು ಸಂಪೂರ್ಣ ಕೆಲಸ ನಿರ್ವಹಿಸಿ ಕೂಲಿ ಪಡೆಯಬೇಕು. ಕಾಯಕಬಂಧುಗಳು ಕೂಲಿಕಾರರಿಂದ ಸರಿಯಾಗಿ ಕೆಲಸ ತೆಗೆದುಕೊಳ್ಳಬೇಕು. ಕೆಲಸಕ್ಕೆ ಹಾಜರಾದವರಿಗೆ ಮಾತ್ರ ಎನ್‌ಎಂಎಂಎಸ್ ಹಾಜರಾತಿ ಹಾಕಲಾಗುವುದು.

ಕೆರೆ ಹೂಳೆತ್ತುವುದರಿಂದ ಅಂತರ್ಜಲ ವೃದ್ಧಿಯಾಗಿ, ರೈತರ ಬೋರ್‌ವೆಲ್ಗಳು ರಿಚಾರ್ಜ್ ಆಗುತ್ತವೆ. ಹೀಗಾಗಿ, ಸರಿಯಾಗಿ ಕೆಲಸ ನಿರ್ವಹಿಸಬೇಕು ಎಂದರು. ಕಾರ್ಯದರ್ಶಿ ಈಶಪ್ಪ, ವಿಷಯ ನಿರ್ವಾಹಕರಾದ ಆಂಜನೇಯ, ರುದ್ರಯ್ಯಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net