

ಕಾಸರಗೋಡು: ಮವ್ವಲ್ನಲ್ಲಿ ಕಂಟೈನರ್ ಲಾರಿಯಿಂದ ಇಳಿಸುವಾಗ ಮಾರ್ಬಲ್ ಮೈಮೇಲೆ ಬಿದ್ದು, ಮಧ್ಯಪ್ರದೇಶ ನಿವಾಸಿ ಜಮೀನ್ಖಾನ್(42)ದಾರುಣವಾಗಿ ಮೃತಪಟ್ಟಿದ್ದಾರೆ.
ಬೇಕಲ ಮೀತ್ತಲ್ ಮವ್ವಲ್ನ ಮಸೀದಿ ಬಳಿ ಹೊಸದಾಗಿ ನಿರ್ಮಿಸುತ್ತಿರುವ ಮನೆಗೆ ಮಾರ್ಬಲ್ ಇಳಿಸುವಾಗ ದುರಂತ ಸಂಭವಿಸಿದೆ. ದೊಡ್ಡ ಲಾರಿ ಹೊಸ ಮನೆ ನಿರ್ಮಾಣವಾಗುವ ಪ್ರದೇಶಕ್ಕೆ ಸಾಗಲು ಅನನುಕೂಲವಿದ್ದ ಹಿನ್ನೆಲೆಯಲ್ಲಿ ಕಂಟೈನರ್ನಿಂದ ಕೆಳಗಿಳಿಸಿ, ಮಿನಿ ಲಾರಿಗೆ ಹೇರುವ ಮಧ್ಯೆ ಮಾರ್ಬಲ್ ಏಕಾಏಕಿ ಮೈಮೇಲೆ ಬಿದ್ದಿದೆ. ಜತೆಗಿದ್ದ ಕಾರ್ಮಿಕರು ರಕ್ಷಿಸಿದರೂ, ಜಮೀನ್ಖಾನ್ ಅವರು ಮಾರ್ಬಲ್ ಸಂದಿಯಲ್ಲಿ ಸಿಲುಕಿಕೊಂಡಿದ್ದು, ಅಗ್ನಿಶಾಮಕ ದಳ ಆಗಮಿಸಿ ಅವರನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.