ವಿದ್ಯುತ್ ತಗುಲಿ ಕೂಲಿ ಕಾರ್ಮಿಕ ಸಾವು

IMG_20240407_170316
Published on

ಬೇಲೂರು: ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಸಾಲವರ ಗ್ರಾಮದಲ್ಲಿ ಭಾನುವಾರ ತೋಟದಲ್ಲಿ ಮೆಣಸು ಕೊಯ್ಯುವಾಗ ಏಣಿಗೆ ವಿದ್ಯುತ್ ಪ್ರವಹಿಸಿ ಕೂಲಿ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಕಾಸರಗೋಡಿನ ಮಂಜೇಶ್ವರ ಮೂಲದ 32 ವರ್ಷದ ಸಮೀರ್ ಮೃತ. ತಾಲೂಕಿನ ದೊಡ್ಡಸಾಲವಾರ ಗ್ರಾಮದ ಹುಕ್ಕುಂ ಚಂದ್ ಎಂಬುವವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಮೀರ್, ಮೆಣಸು ಕೊಯ್ಯುವುದಕ್ಕಾಗಿ ಅಲ್ಯುಮಿನಿಯಂ ಏಣಿಯನ್ನು ಮರದ ಮೇಲೆ ಹಾಕುತ್ತಿದ್ದ ಸಂದರ್ಭ ತೋಟದಲ್ಲಿ ಹಾದು ಹೋಗಿದ್ದ ಹೈ ಟೆನ್ಷನ್ ವಿದ್ಯುತ್ ತಂತಿಗೆ ತಗುಲಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ತಹಸೀಲ್ದಾರ್ ಎಂ.ಮಮತಾ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಬೇಲೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net