ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕ ಸಾವು

download
Published on


ವಿರಾಜಪೇಟೆ: ವಿರಾಜಪೇಟೆಯ ದೇವಾಂಗ ಬೀದಿ ಮನೆಯೊಂದರಲ್ಲಿ ಶನಿವಾರ ವಿದ್ಯುತ್ ಸ್ಪರ್ಶಿಸಿ ಕೂಲಿ ಕಾರ್ಮಿಕ ಸಾವನ್ನಪ್ಪಿದ್ದಾರೆ.


ಪಟ್ಟಣದ ದೇವಾಂಗ ಬೀದಿ ನಿವಾಸಿ ಎಚ್.ಸಿ.ಸಿದ್ದೇಗೌಡ(56) ಮೃತರು. ಇವರು ಮೈಸೂರು ಜಿಲ್ಲೆ, ಹುಣಸೂರು ತಾಲೂಕಿನ ಹರದನಹಳ್ಳಿ ಗ್ರಾಮದವರಾಗಿದ್ದು, 10 ವರ್ಷಗಳ ಹಿಂದೆ ಕೂಲಿಗಾಗಿ ಬಂದು ಕುಟುಂಬದೊಂದಿಗೆ ಇಲ್ಲೇ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಸಿದ್ದೇಗೌಡ ಅನಾರೋಗ್ಯ ಹಿನ್ನೆಲೆ ಹಲವು ತಿಂಗಳಿಂದ ಕೆಲಸಕ್ಕೆ ತೆರಳದೆ ಮನೆಯಲ್ಲಿದ್ದರು. ಶನಿವಾರ ಬೆಳಗ್ಗೆ ಅರಿವಿಲ್ಲದೆ ವಿದ್ಯುತ್ ವಯರ್ ಹಿಡಿದಿದ್ದಾರೆ. ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆ ವೇಳೆಗಾಗಲೇ ಮೃತಪಟ್ಟಿದ್ದರು.

ಮೃತರಿಗೆ ಪತ್ನಿ, ಪುತ್ರ-ಪುತ್ರ ಇದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net