ವಾಹನ ಪಲ್ಟಿಯಾಗಿ ಕೂಲಿಕಾರ್ಮಿಕ ಸಾವು

22 LXR 4
Published on

ಲಕ್ಷ್ಮೇಶ್ವರ: ಸಮೀಪದ ಬಸಾಪುರ ಗ್ರಾಮದ ಹತ್ತಿರ ಮಂಗಳವಾರ ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಟಾಟಾ ಏಸ್ ವಾಹನ ಪಲ್ಟಿಯಾಗಿ ಒಬ್ಬರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ.

ಸವಣೂರ ತಾಲೂಕಿನ ವಡ್ನಿಕೊಪ್ಪ ಗ್ರಾಮದಿಂದ 12 ಕೂಲಿ ಕಾರ್ಮಿಕರನ್ನು ಕರೆದುಕೊಂಡು ಕುಂದಗೋಳಕ್ಕೆ ಶೇಂಗಾ(ಬಣವೆ) ಒಟ್ಟಲಿಕ್ಕೆ ಹೊರಟ್ಟಿದ್ದರು. ದಾರಿಯಲ್ಲಿ ವಾಹನದ ಟೈರ್ ಸಿಡಿದು ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರ ಸಹಾಯದಿಂದ ಎರಡು ಆಂಬುಲೆನ್ಸ್ ಮುಖಾಂತರ ಲಕ್ಷ್ಮೇಶ್ವರಕ್ಕೆ ಗಾಯಾಳುಗಳನ್ನು ಸಾಗಿಸಲಾಯಿತು. ತೀವ್ರವಾಗಿ ಗಾಯಗೊಂಡಿದ್ದ ವಡ್ನಿಕೊಪ್ಪ ಗ್ರಾಮದ ಸುರೇಶ ಬಸಪ್ಪ ಮ್ಯಾಗೇರಿ(45) ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಪಟ್ಟಣದ ಸರ್ಕಾರಿ ಸಮುದಾಯ ಅರೋಗ್ಯ ಕೇಂದ್ರದಲ್ಲಿ 5 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ, ಮೂವರನ್ನು ಹೆಚ್ಚಿನ ಚಿಕಿತ್ಸೆಗೆ ಗದಗದ ಜಿಮ್ಸ್ ಕಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net