ಕಾರ್ಮಿಕರಿಗೆ ಕನಿಷ್ಠ ವೇತನ ಖಾತ್ರಿ ಪಡಿಸಿ - ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎಚ್.ತಿಪ್ಪಯ್ಯ ಒತ್ತಾಯ

080120 Kampli CPIM Protest
Published on

ಕಂಪ್ಲಿ: ಇಲ್ಲಿನ ಸಿಐಟಿಯು ಕಂಪ್ಲಿ ತಾಲೂಕು ಸಂಚಲನ ಸಮಿತಿ ಕಾರ್ಮಿಕ ವರ್ಗದ ನೇತೃತ್ವದಲ್ಲಿ ಸಾರ್ವತ್ರಿಕ ಮುಷ್ಕರ ನಡೆಸಿತು.
ರ‌್ಯಾಲಿ ಸಾಗುವ ಹಾದಿಯಲ್ಲಿನ ವರ್ತಕರು ಅಂಗಡಿಗಳನ್ನು ಮುಚ್ಚಿ ಸಹಕರಿಸಿದರು. ಅಂಬೇಡ್ಕರ್ ವೃತ್ತದಲ್ಲಿ ರ‌್ಯಾಲಿ ಸಮಾವೇಶಗೊಂಡಿತು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎಚ್.ತಿಪ್ಪಯ್ಯ ಮಾತನಾಡಿ, ಕಾರ್ಮಿಕರಿಗೆ ಕನಿಷ್ಠ ವೇತನ ಖಾತ್ರಿ ಪಡಿಸಬೇಕು. ಅಂಗನವಾಡಿಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಬೇಕು. ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಬೇಕು. ತುಂಗಭದ್ರಾ ನದಿಗೆ ನೂತನ ಸೇತುವೆ ನಿರ್ಮಿಸಬೇಕು. ಅಲ್ಲಿವರೆಗೆ ಸೇತುವೆ ಮೇಲೆ ಭಾರಿ ವಾಹನಗಳ ಸಂಚಾರ ನಿಷೇಧಿಸಬೇಕು ಎಂದು ಒತ್ತಾಯಿಸಿದರು. ಸಿಐಟಿಯು ತಾಲೂಕು ಸಂಚಾಲಕ ಬಂಡಿ ಬಸವರಾಜ, ಡಿ.ಮುನಿಸ್ವಾಮಿ, ಮಾನ್ವಿ ಮಹೇಶ್, ಕಟ್ಟಡ ಕಾರ್ಮಿಕ ಸಂಘದ ತಾಲೂಕು ಅಧ್ಯಕ್ಷ ಐ.ಹೊನ್ನೂರಸಾಬ್, ಉಪಾಧ್ಯಕ್ಷ ರಾಜಭಕ್ಷಿ, ಅಂಗನವಾಡಿ ಹಾಗೂ ಸಹಾಯಕಿಯರ ತಾಲೂಕು ಅಧ್ಯಕ್ಷೆ ಎಚ್.ಮಂಜುಳಾ, ಉಪಾಧ್ಯಕ್ಷೆ ಅನುರಾಧ, ರಾಧಬಾಯಿ, ಗ್ರಾಪಂ ನೌಕರರ ಸಂಘದ ತಾಲೂಕು ಅಧ್ಯಕ್ಷ ಜಡೆಯ್ಯಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net