ಕಾರ್ಮಿಕ ಕುಟುಂಬದ ಆರೋಗ್ಯ ತಪಾಸಣೆ

sri-3 (3)
Published on

ಶೃಂಗೇರಿ: ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದಿಂದ ಗುರುವಾರ ಕನ್ನಡ ಭವನದಲ್ಲಿ ಕಾರ್ಮಿಕ ಮಿತ್ತ ಬಳಗದ ಸಹಯೋಗದೊಂದಿಗೆ ಇಲಾಖೆಯ ನೋಂದಾಯಿತಕಟ್ಟಡ ಕಾರ್ಮಿಕರ ಕುಟುಂಬದವರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ಜಿಲ್ಲಾ

ಸರ್ಕಾರಿ ಅಸ್ಪತ್ರೆ ವೈದ್ಯರಾದ ಡಾ.ಸಚಿನ್ ಮತ್ತು ತಂಡ ಕಾರ್ಮಿಕರ ಆರೋಗ್ಯ ತಪಾಸಣೆ

ನಡೆಸಿದರು.ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಜಯರಾಮ್ ಮಾತನಾಡಿ, ಸಮುದಾಯದಲ್ಲಿಕಾರ್ಮಿಕರು ಇಲ್ಲದೇ ಯಾವ ಕಾರ್ಯ ಮುಂದುವರಿಯಲು ಸಾಧ್ಯವಿಲ್ಲ. ಕಟ್ಟಡ ನಿರ್ಮಾಣ, ಕೂಲಿಕಾರ್ಮಿಕರು, ಕೃಷಿ ಕಾರ್ಮಿಕರ ಅಗತ್ಯತೆ ನಿರತವಾಗಿ ಬೇಕಾಗಿದೆ. ಆದರೆ ಕಾರ್ಮಿಕರಿಗೆಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಹಾಗೂ ಸಾಮಾಜಿಕ ಭದ್ರತೆ ನೀಡಲುಕಾರ್ಮಿಕ ಇಲಾಖೆ ಬದ್ಧವಾಗಿದ್ದು, ಕಾರ್ಮಿಕರು ಅವಶ್ಯಕ ದಾಖಲೆಗಳನ್ನು ನೀಡಬೇಕು. ಆಗ ಮಾತ್ರಅವರಿಗೆ ಸರ್ಕಾರದಿಂದ ಲಭ್ಯವಿರುವ ಎಲ್ಲ ಯೋಜನೆಗಳನ್ನು ಪಡೆಯಲು ಸಾಧ್ಯ ಎಂದರು. ಸರ್ಕಾರಪ್ರೌಢಾಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೂ ಉಚಿತ ಆರೋಗ್ಯತಪಾಸಣಾ ನಡೆಸಲಾಯಿತು. ಕಾರ್ಮಿಕ ಮಿತ್ರ ಬಳಗದ ರಮೇಶ್. ಜಯರಾಮ್, ಆರೋಗ್ಯ

ಸಿಬ್ಬಂದಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net