ನಕಲಿ ದಾಖಲೆ ಕೊಟ್ಟು ನೋಂದಣಿ: ಗುರುತಿನ ಚೀಟಿ ಹಿಂದಿರುಗಿಸದಿದ್ದರೆ ಕೇಸ್ ದಾಖಲು

Labor Department mandya
Published on

ಮಂಡ್ಯ: ಜಿಲ್ಲಾ ಕಾರ್ಮಿಕ ಇಲಾಖೆಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಲ್ಲದವರು ನಕಲಿ ದಾಖಲೆ ಸಲ್ಲಿಸಿ ನೋಂದಣಿಯಾಗಿರುವುದು ಕಂಡುಬಂದಿದೆ. ಆದ್ದರಿಂದ ತಮಗೆ ನೀಡಿರುವ ಗುರುತಿನ ಚೀಟಿಯನ್ನು ಕಚೇರಿಗೆ ಹಿಂದಿರುಗಿಸಿ ನೋಂದಣಿ ರದ್ದುಪಡಿಸಿಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ.

ನಕಲಿ ದಾಖಲೆ ನೀಡಿ ನೋಂದಾಯಿತರಾದ ಅನರ್ಹ ಕಾರ್ಮಿಕರನ್ನು ಪತ್ತೆ ಹಚ್ಚಲು ರಾಜ್ಯಾದ್ಯಂತ ಪರಿಶೀಲನೆ ನಡೆಸಲಾಗುತ್ತಿದೆ. ಈ ಸಮಯದಲ್ಲಿ ಅನರ್ಹರು ನೋಂದಣಿಯಾಗಿರುವುದು ಕಂಡುಬಂದಲ್ಲಿ ಅವರು ಮಂಡಳಿಯಿಂದ ಈವರೆಗೂ ಪಡೆದ ಎಲ್ಲ ಸೌಲಭ್ಯಗಳನ್ನು ದಂಡ ಸಹಿತ ವಸೂಲು ಮಾಡುವುದರ ಜತೆಗೆ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು. ಮಾಹಿತಿಗೆ ಸಹಾಯವಾಣಿ 15521424 ಸಂಖ್ಯೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net