ಲ್ಯಾಬ್‌ನಲ್ಲೇ ನೇಣು ಬಿಗಿದುಕೊಂಡ ಟೆಕ್ನೀಷಿಯನ್‌

suicide
Published on

ಭಟ್ಕಳ: ಪಟ್ಟಣದ ಇಂಜನೀಯರಿಂಗ್ ಕಾಲೇಜಿನಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಕಾಲೇಜಿನ ಪಿಲ್ಡ್ ಮೆಕ್ಯಾನಿಕಲ್ ಲ್ಯಾಬ್ ಕೊಠಡಿಯಲ್ಲಿ ಸಿಲಿಂಗ್ ಫ್ಯಾನೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಟ್ಕಳದ ಬೆಳ್ನಿಯ ನಿವಾಸಿ ಶ್ರೀಧರ ಮಾದೇವ ಮೊಗೇರ (53) ಮೃತ ವ್ಯಕ್ತಿ. ಇವರು ಹಲವಾರು ಬ್ಯಾಂಕಗಳಲ್ಲಿ ಸಾಲವನ್ನು ಮಾಡಿದ್ದರು. ಮತ್ತು ತಾವು ಕೆಲಸ ಮಾಡುತ್ತಿದ್ದ ಕಾಲೇಜಿನಲ್ಲಿ ಕಡಿಮೆ ಸಂಬಳ, ತುಟ್ಟಿ ಭತ್ಯೆ ನೀಡದೇ ಇದ್ದದನ್ನು ಮನಸ್ಸಿಗೆ ಹಚ್ಚಿಕೊಂಡು, ಮುಂದೆ ಜೀವನ ಮಾಡುವುದು ಕಷ್ಟ ಅಂತಾ ಜೀವನದಲ್ಲಿ ಜಿಗುಪ್ಪೆಗೂಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಡೆತ್ ನೋಟ್ ಬರೆದು ಸಾವಿಗೆ ಶರಣಾಗಿದ್ದು ಅವರ ಸಾವಿನಲ್ಲಿ ಸಂಶಯವಿದೆ ಎಂದು ಅವರ ಪತ್ನಿ ಮಮತಾ ಮೊಗೇರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net