ಅಭಿವೃದ್ಧಿ ಕಾಮಗಾರಿಗಳಿಗೆ ಎಲ್.ನಾಗೇಂದ್ರ ಚಾಲನೆ

2
Published on


ಮೈಸೂರು:
ಚಾಮರಾಜ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಲು ಪಣ ತೊಟ್ಟಿರುವ ಶಾಸಕ ಎಲ್.ನಾಗೇಂದ್ರ ಕ್ಷೇತ್ರದಲ್ಲಿ ನಿರಂತರವಾಗಿ ಅಭಿವೃದ್ಧಿ ಕಾಮಗಾರಿ ನಡೆಸುತ್ತಿದ್ದು, ಸೋಮವಾರವೂ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ರಸ್ತೆ ಹಾಗೂ ಯುಜಿಡಿ ನಿರ್ಮಾಣ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ದುಡಿಯುತ್ತಿರುವ ಶಾಸಕರು, ಮಹಾನಗರ ಪಾಲಿಕೆಯ ಎಸ್‌ಎಫ್‌ಸಿ ವಿಶೇಷ ಅನುದಾನ 1 ಕೋಟಿ ರೂ. ವೆಚ್ಚದಲ್ಲಿ ವಾರ್ಡ್ ಸಂಖ್ಯೆ 22ರ ರಸ್ತೆ ಡಾಂಬರೀಕರಣ, ಪಡುವಾರಹಳ್ಳಿಯ 2,3,4,5 ನೇ ಮೇನ್ ರಸ್ತೆಗಳು ಹಾಗೂ ಅಡ್ಡ ರಸ್ತೆಗಳಿಗೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದರು.

ನಗರಪಾಲಿಕೆ ಸದಸ್ಯ ಚಿಕ್ಕವೆಂಕಟು, ಮಾಜಿ ಸದಸ್ಯ ಶ್ರೀರಾಮ್, ವಾರ್ಡ್ ಅಧ್ಯಕ್ಷ ಮಂಜು, ಮುಖಂಡರಾದ ಸೋಮಣ್ಣ, ಯಜಮಾನ ರಾಮಣ್ಣ, ಪೈಲ್ವಾನ್ ಶಿವು, ಶಂಬಣ್ಣ, ನಿಂಗಣ್ಣ, ಭೈರಪ್ಪ, ಗಿರೀಶ್, ವೇಣು, ಸುಧಾಮಣಿ, ಸುಧಾ ರಾಮಚಂದ್ರ, ಉಮಾ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net