

ಚೆಟ್ಟಳ್ಳಿ: ಕೊಡಗಿನ ಹಲವೆಡೆ ಕೊಡಗಿನ ಸಾಂಪ್ರದಾಯದ ಕೈಲ್ ಪೊಳ್ದ್ ನಮ್ಮೆಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು.
ಅದರಂತೆ ಚೆಟ್ಟಳ್ಳಿಯ ಪುತ್ತರಿರ ಐನ್ ಮನೆಯಲ್ಲಿ ಕುಟುಂಬಸ್ತರೆಲ್ಲ ಸೇರಿ ಕೈಲ್ ಪೊಳ್ದ್ ನಮ್ಮೆಯನ್ನು ಆಚರಿಸಿದರು. ದೇವನೆಲೆಯಾದ ನೆಲ್ಲಕ್ಕಿ ನಡುಬಾಡೆಯಲ್ಲಿ ಕೋವಿ, ಓಡಿಕತ್ತಿ, ಗೆಜ್ಜೆತಂಡನಿಟ್ಟು ತೋಕ್ ಪೂ ಮೀದಿ ನೀರಿಟ್ಟು ಕುಟುಂಬದ ಹಿರಿಯರಾದ ನಿವೃತ್ತ ವಾಯುಸೇನಾಪಡೆ ಸೇನಾನಿ ಪುತ್ತರಿರ ಗಣೇಶ್ ಭೀಮಯ್ಯ ಪೂಜೆಸಲ್ಲಿಸಿದರು. ಹಬ್ಬದ ವಿಶೇಷ ಭೋಜನದ ನಂತರ ಹಿರಿಯರು, ಕಿರಿಯರು, ಮಹಿಳೆಯರು ತೆಂಗಿನ ಕಾಯಿಗೆ ಗುಂಡು ಹೊಡೆಯಲಾಯಿತು.
ನಂತರ ನೆರೆಯ ಊರಿನವರು ಊರುಮಂದ್‌ನಲ್ಲಿ ತೆಂಗಿನ್ಕಾಯಿಗೆ ಗುಂಡುಹೊಡೆಯುವ ಮೂಲಕ ಹಬ್ಬಕ್ಕೆ ತೆರೆಬೀಳಲಾಯಿತು. ಈ ಸಂದರ್ಭದಲ್ಲಿ ಕುಟುಂಬಸ್ತರಾದ ಪುತ್ತರಿರ ಕಾಶಿ ಸುಬ್ಬಯ್ಯ, ದೇವಿ ದೇವಯ್ಯ, ಸುಜು ಬಿದ್ದಪ್ಪ, ರಾಣಿ ಸೋಮಯ್ಯ ಇತರರಿದ್ದರು.