ಕೂಡಿಗೆಯಲ್ಲಿ ಕೈಲ್ ಪೊಳ್ದ್ ಸಂತೋಷ ಕೂಟ

Kyle Pold happy party at Kudige
Published on

ಕುಶಾಲನಗರ:

ವಿಶ್ವದಲ್ಲಿಯೇ ವಿಶೇಷವಾಗಿರುವ ಕೊಡವರ ಆಚಾರ ವಿಚಾರಗಳು ಹಾಗೂ ಸಂಸ್ಕ್ರತಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಜೋಪಾನವಾಗಿ ಒಯ್ಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕುಟ್ಟಂಡ ಪ್ರಮೋದ್ ಮುತ್ತಪ್ಪ ಹೇಳಿದರು. ಕೂಡಿಗೆಯ ಕೊಡವ ಕೂಟದ ವತಿಯಿಂದ ಸ್ಥಳೀಯ ರೈತ ಸಹಕಾರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕೈಲ್ದ್ ಪೊಳ್ದ್ ಸಂತೋಷ ಕೂಟ ಹಾಗೂ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕೊಡವ ಕೂಟದ ಅಧ್ಯಕ್ಷ ವಾಂಚೀರ ಮನು ನಂಜುAಡ ಮಾತನಾಡಿ, ಕೊಡವರ ಜಮ್ಮಾ ಆಸ್ತಿ ಪಾಸ್ತಿಗಳನ್ನು ಪರಾಭಾರೆ ಮಾಡದಂತೆ ಜೋಪಾನವಾಗಿ ಮುಂದಿನ ಪೀಳಿಗೆಗೆ ಸಂರಕ್ಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯ ಕೊಡವ ಪರಂಪರೆ ಹಾಗೂ ಸಂಸ್ಕ್ರತಿಯ ವಾರಸುದಾರರಾಗಬೇಕು. ಹಾಗಾಗಿ ಮಕ್ಕಳಿಗೆ ಪೋಷಕರು ಉತ್ತಮ ವಿದ್ಯಾಭ್ಯಾಸ ನೀಡುವಲ್ಲಿ ವಿಶೇಷ ಶ್ರಮ ವಹಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಕೊಡವ ಕೂಟದ ಕಾರ್ಯದರ್ಶಿ ಮುಂಡAಡ ಸತೀಶ್, ಖಜಾಂಚಿ ದೇಯಂಡ ಪೊನ್ನಪ್ಪ, ನಿರ್ದೇಶಕರಾದ ಕೊಳುವಂಡ ಮಂದಪ್ಪ, ಪಟ್ಟಡ ಚಿಟ್ಟಿಯಪ್ಪ, ಮುಕ್ಕಾಟಿರ ಅಪ್ಪಣ್ಣ, ಐಮುಡಿಯಂಡ ರಮೇಶ್, ಪಟ್ಟಡ ಬೀನಾ, ಪಾಲೆಂಗಡ ಸುಜಾತ, ಐಮುಡಿಯಂಡ ಸವಿತಾ, ಕೋಡಿಮಣಿಯಂಡ ಸವಿತಾ, ಪಾಲೆಂಗಡ ಸುಜಾತಾ, ಕೊಳುವಂಡ ಮಂದಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net