ಯಡವಾರೆಯಲ್ಲಿ ಕೈಲ್‌ಮೂರ್ತ ಸಡಗರ

ಸೋಮವಾರಪೇಟೆ ಸಮೀಪದ ಯಡವಾರೆಯಲ್ಲಿ ಅರೆಭಾಷೆ ಗೌಡ ಸಮಾಜದಿಂದ ಆಯೋಜಿಸಿದ್ದ 8ನೇ ವರ್ಷದ ಕೈಲ್‌ಮೂರ್ತ ಸಂತೋಷ ಕೂಟ ಸಮಾರಂಭವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು. ಭರತ್, ಗಣಪತಿ, ಸದಾನಂದ ಇತರರು ಇದ್ದರು.
ಸೋಮವಾರಪೇಟೆ ಸಮೀಪದ ಯಡವಾರೆಯಲ್ಲಿ ಅರೆಭಾಷೆ ಗೌಡ ಸಮಾಜದಿಂದ ಆಯೋಜಿಸಿದ್ದ 8ನೇ ವರ್ಷದ ಕೈಲ್‌ಮೂರ್ತ ಸಂತೋಷ ಕೂಟ ಸಮಾರಂಭವನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು. ಭರತ್, ಗಣಪತಿ, ಸದಾನಂದ ಇತರರು ಇದ್ದರು.
Published on

ಸೋಮವಾರಪೇಟೆ: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ ಗ್ರಾಮದ ಅರೆಭಾಷೆ ಗೌಡ ಸಮಾಜದಿಂದ 8ನೇ ವರ್ಷದ ಕೈಲ್‌ಮೂರ್ತ ಸಂತೋಷ ಕೂಟ ಸಮಾಜದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿತ್ತು.

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ.ಮಂತರ್‌ಗೌಡ, ಜನಾಂಗದ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳಸಿಕೊಂಡು ಹೋಗಬೇಕು. ಹಬ್ಬ ಹರಿದಿನಗಳಲ್ಲಿ ಸಮಾಜದ ಕಲೆ ಸಂಸ್ಕೃತಿ ಪ್ರತಿಬಿಂಬಿಸುವ ಕಲಾ ಪ್ರಕಾರ ಸ್ಪರ್ಧೆಗಳನ್ನು ಆಯೋಜಿಸಬೇಕು. ಇದರಿಂದ ಮಕ್ಕಳು, ಯುವಜನರು ಕಲೆ, ನೃತ್ಯಗಳನ್ನು ಕಲಿಯುತ್ತಾರೆ ಎಂದರು.

ಹಿರಿಯರು ಕಾಪಾಡಿಕೊಂಡು ಬಂದ ಸಂಸ್ಕೃತಿ, ಅಚಾರ ವಿಚಾರಗಳು ಮುಂದಿನ ತಲೆಮಾರಿಗೂ ತಲುಪಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಗೂರು ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ಬಾರನ ಬಿ. ಭರತ್‌ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ಪೊನ್ನಚನ ಕೆ. ಗಣಪತಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ, ಕಾಫಿ ಬೆಳೆಗಾರರಾದ ಕಾಸ್ಪಾಡಿ ಬಿ. ತಮ್ಮಯ್ಯ, ಪಾಣತ್ತಲೆ ಜಿ. ಜನಾರ್ಧನ ಇತರರು ಇದ್ದರು.

ಕಾರ್ಯಕ್ರಮದ ಪ್ರಯುಕ್ತ ಸಮಾಜದವರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕಾಳೇರಮ್ಮನ ಸಾವಿತ್ರಿ ಪಾಲಾಕ್ಷ ಪ್ರೋತ್ಸಾಹ ಧನ ವಿತರಿಸಿದರು. ಪದವಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಚೆರಿಯಮನೆ ರಾಮಪ್ಪ ಪ್ರೋತ್ಸಾಹ ಧನ ನೀಡಿದರು.

ಚಿಕ್ಕ ಮಕ್ಕಳಿಗೆ ಕಾಳು ಹೆಕ್ಕುವ ಸ್ಪರ್ಧೆ, ವಿದ್ಯಾರ್ಥಿಗಳಿಗೆ ಓಟದ ಸ್ಪರ್ಧೆ, ವಯಸ್ಕರಿಗೆ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಲಿಂಬೆ ಹಣ್ಣನ್ನು ಚಮಚದಲ್ಲಿರಿಸಿ ಬಾಯಿಯಲ್ಲಿಟ್ಟು ಓಡುವ ಸ್ಪರ್ಧೆ, ಬಾಂಬ್ ಇಂದ ಸಿಟಿ, ಪಾಸಿಂಗ್ ದ ಬಾಲ್ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆ ನಡೆದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net