ಕೈಲ್ ಮುಹೂರ್ತ ಕ್ರೀಡಾಕೂಟ

ಕೈಲ್ ಮುಹೂರ್ತ ಕ್ರೀಡಾಕೂಟ
Published on

ನಾಪೋಕ್ಲು: ಸಮೀಪದ ಬಲಮುರಿ ಗ್ರಾಮದ ಮಹದೇವ ಕ್ರೀಡಾ ಮಂಡಳಿ ವತಿಯಿಂದ ಬಲಮುರಿ ಹೊಳೆಮುಡಿ ಮೈದಾನದಲ್ಲಿ 72ನೇ ವರ್ಷದ ಕೈಲ್ ಮುಹೂರ್ತ ಕ್ರೀಡಾಕೂಟದ ಅಂಗವಾಗಿ ವಿವಿಧ ಸ್ಪರ್ಧೆ ಆಯೋಜಿಸಲಾಗಿತ್ತು.

ಭಾರದ ಕಲ್ಲು ಎಸೆಯುವುದು, ಗೋಣಿಚೀಲ ಓಟ, ಮೂರು ಕಾಲಿನ ಓಟ, ಸ್ಲೋ ಸೈಕಲ್ ರೇಸ್, ನಿಂಬೆ ಚಮಚ ಓಟ ಸೇರಿದಂತೆ ವಿವಿಧ ಸ್ಪರ್ಧೆ ನಡೆದವು.

ಕೊಣಂಜಗೇರಿ ಗ್ರಾಮ ಪಂಚಾಯಿತಿ ಸದಸ್ಯ ಬೊಳ್ಳಚೆಟ್ಟೀರ ಪ್ರಕಾಶ್ ಕಾಳಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಾದೇವ ಕ್ರೀಡಾ ಮಂಡಳಿ ಅಧ್ಯಕ್ಷ ತೊತ್ತಿಯಂಡ ಬನ್ಸಿ ಚಿಣ್ಣಪ್ಪ, ನಿವೃತ್ತ ವಿಜ್ಞಾನಿ ನಾಡಂಡ ಎ.ಪ್ರಿನ್ಸ್ ತಿಮ್ಮಯ್ಯ, ನಿವೃತ್ತ ನಾಯಕ್ ಸುಬೇದಾರ್ ಪೊನ್ನಚ್ಚನ ದಯಾನಂದ, ನಿವೃತ್ತ ಸುಬೇದಾರ್ ಬೊಳ್ಳಚೆಟ್ಟಿರ ವಿಜಯ ಚೆಟ್ಟಿಚ್ಚ ಇತರರು ಇದ್ದರು. ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net