

ಹುಬ್ಬಳ್ಳಿ: ಕೆವೈಸಿ ಮಾಹಿತಿ ಪಡೆದ ಅಪರಿಚಿತರು, ಸತ್ತೂರಿನ ವಿದ್ಯಾರ್ಥಿಯೊಬ್ಬರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಆನ್ಲೈನ್ ಮೂಲಕ ಹಣ ವರ್ಗಾಯಿಸಿಕೊಂಡಿದ್ದಾರೆ.
ಆರ್ಯ ಎನ್ನುವ ವಿದ್ಯಾರ್ಥಿ ಬ್ಯಾಂಕ್ ಕೆವೈಸಿ ಅಪ್ಡೇಟ್ ಮಾಡುತ್ತಿದ್ದಾಗ ಅಪರಿಚಿತರು ವಾಟ್ಸ್ಆಪ್ಗೆ ಲಿಂಕ್ ಕಳುಹಿಸಿದ್ದಾರೆ. ಲಿಂಕ್ ಓಪನ್ ಮಾಡಿ ಕೆವೈಸಿ ಅಪ್ಡೇಟ್ ಮಾಡಲು ಹೋದಾಗ ಹಂತ ಹಂತವಾಗಿ ಒಟ್ಟು 2,01,791 ರೂ. ಆರ್ಯ ಖಾತೆಯಿಂದ ವರ್ಗಾಯಿಸಿಕೊಂಡಿದ್ದಾರೆ. ಸಿಇಎನ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.