ಮನೆಯಲ್ಲೇ ಇಕೆವೈಸಿ

KYC at home
Published on

ಮಡಿಕೇರಿ:

ಭಾರತ್ ಗ್ಯಾಸ್ ಬಳಕೆದಾರರು ಇಕೆವೈಸಿ ಮಾಡಿಸಿಕೊಳ್ಳಲು ಕುಶಾಲನಗರದ ಭಾರತ್ ಗ್ಯಾಸ್ ಕಚೇರಿ ಬಳಿ ಬಂದು ಸರದಿ ಸಾಲು ನಿಲ್ಲುವ ಅಗತ್ಯವಿಲ್ಲ ಎಂದು ಕಚೇರಿಯ ಪ್ರಕಟಣೆ ತಿಳಿಸಿದೆ.

ಇಕೆವೈಸಿ ಮಾಡಿಸಿಕೊಳ್ಳಲು ಮನೆಯಲ್ಲೇ ಕುಳಿತು ಮೈ ಬಿಪಿಸಿಎಲ್ ಆಪ್ ನಲ್ಲಿ ಕ್ಯೂ ಆರ್ ಕೋಡ್ ಬಳಸಿ ನೋಂದಣಿ ಮಾಡಿಕೊಳ್ಳುವಂತೆ ಅಥವಾ ಭಾರತ್ ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸಲು ಮನೆ ಬಾಗಿಲಿಗೆ ಬರುವ ಗ್ಯಾಸ್ ವಿತರಣೆಯ ಹುಡುಗರ ಬಳಿಯೂ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಹಾಗೂ ಇದಕ್ಕೆ ಯಾವುದೇ ಸಮಯದ ಮಿತಿ ಇರುವುದಿಲ್ಲ ಎಂದು ಭಾರತ್ ಗ್ಯಾಸ್ ಸಂಸ್ಥೆಯ ವಿತರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net