ರೋಗಮುಕ್ತ ಸಮಾಜಕ್ಕೆ ಶ್ರಮಿಸಲಿ

22Kakamari1
Published on

ಕಕಮರಿ: ಶುದ್ಧ ಆಹಾರ ಸೇವಿಸುವ ಮೂಲಕ ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಇಲ್ಲಿನ ಗುರುದೇವ ಆಶ್ರಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರೈತೋತ್ಸವ ಹಾಗೂ ರಾಜ್ಯಮಟ್ಟದ ತೆರಬಂಡಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ನಿಷ್ಕಲ್ಮಸ ಮನಸ್ಸಿನಿಂದ ಭೂಮಿತಾಯಿ ನಂಬಿ ಬೆಳೆ ಬೆಳೆಯುವ ರೈತರ ಸೇವೆ ಶ್ಲಾಘನೀಯ. ರೈತರ ಪಾದಪೂಜೆಯಿಂದ ಜೀವನ ಸಾರ್ಥಕವಾಗುತ್ತದೆ. ರೈತರನ್ನು ಯಾರೂ ಕಡೆಗಣಿಸಬಾರದು ಎಂದರು.

ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್ ಪ್ರಧಾನ ಕಾರ್ಯದರ್ಶಿ ಕಾಂತೇಶ ಈಶ್ವರಪ್ಪ ಮಾತನಾಡಿ, ಎಲ್ಲರೂ ನಿತ್ಯ ರೈತರನ್ನು ಸ್ಮರಿಸಿಕೊಳ್ಳಬೇಕು. ಸಾವಯುಕ ಕೃಷಿಯತ್ತ ರೈತರು ಒಲವು ಹರಿಸಬೇಕು. ರೈತರನ್ನು ಹುಡಕಬೇಕಾದ ಪರಿಸ್ಥಿತಿ ಸನೀಹದಲ್ಲಿದೆ. ಭಾರತ ಸಂಸ್ಕೃತಿಯ ತವರೂರಾಗಿದೆ ಎಂದು ಹೇಳಿದರು.

ತೆಲಸಂಗದ ಅಂಬೇಡ್ಕರ್ ವಸತಿ ಶಾಲೆ ಶಿಕ್ಷಕ ಅಪ್ಪುರಾಜ ಭಜಂತ್ರಿ ರಚಿಸಿದ ಗೀತೆಯ ಧ್ವನಿ ಸುರುಳಿಯನ್ನು ಗಣ್ಯರು ಬಿಡುಗಡೆಗೊಳಿಸಿದರು.

ಪಪೂ ಆತ್ಮಾರಾಮ್ ಸ್ವಾಮೀಜಿ, ಕಲಬುರ್ಗಿ ಸವಿತಾನಂದ ಸ್ವಾಮೀಜಿ, ಕವಲಗುಡ್ಡ ಅಮರೇಶ್ವರ ಮಹಾರಾಜರು, ನಿಪ್ಪಾಣಿ ಪ್ರಾಣಲಿಂಗ ಸ್ವಾಮೀಜಿ, ಗುಂಡಯ್ಯ ಸ್ವಾಮೀಜಿ, ಬೆಳ್ಳೇರಿ ಬಸವಾನಂದ ಸ್ವಾಮೀಜಿ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ವಿಜಯಪುರದ ಡಾ.ರವೀಂದ್ರ ಬೆಳ್ಳಿ, ಸಿದರಾಯ ಯಲಡಗಿ, ಅಥಣಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಮೊರಟಗಿ, ಗ್ರಾಪಂ ಅಧ್ಯಕ್ಷೆ ಸಂಗೀತಾ ಕರಡಿ, ಉದ್ಯಮಿ ಸಿದ್ದೇಶ್ವರ ಹಿರೇಮಠ, ವಕೀಲ ಅಮೋಘಸಿದ್ದ ಖೋಬ್ರಿ, ಅಪ್ಪಾಸಾಹೇಬ ವಾಲಿ, ಅಪ್ಪುರಾಜ ಭಜಂತ್ರಿ ಇತರರು ಇದ್ದರು. ಶಿಕ್ಷಕ ಮಹಾಂತೇಶ ಮಠಪತಿ ಸ್ವಾಗತಿಸಿದರು. ಉಪನ್ಯಾಸಕ ಎಂ.ಬಿ.ಕರಡಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net