ಕಾಂಗ್ರೆಸ್ ನಾಯಕಿ, ಮಾಜಿ ಮೇಯರ್ ಕವಿತಾ ಸನಿಲ್ ಬಿಜೆಪಿ ಸೇರ್ಪಡೆ

Screenshot_20240420_171145_Google
Published on

ಮಂಗಳೂರು: ಕಾಂಗ್ರೆಸ್ ನಾಯಕಿ, ಮಂಗಳೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಕವಿತಾ ಸನಿಲ್ ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವುಜಯೇಂದ್ರ ಅವರ ನೇತೃತ್ವದಲ್ಲಿ ಬಂಟ್ವಾಳದಲ್ಲಿ ಜರುಗಿದ ಪಕ್ಷದ ಸಮಾವೇಶದಲ್ಲಿ ಬಿಲ್ಲವ ಸಮಾಜದ ಕವಿತಾ ಸನಿಲ್ ಮತ್ತು ಬಂಟ್ವಾಳ ತಾಲೂಕು ಪಂಚಾಯಿತಿ ಸದಸ್ಯ ಗಂಗಾಧರ ಪೂಜಾರಿ ಬಿಜೆಪಿ ಸೇರ್ಪಡೆಯಾದರು.
ಪಕ್ಷದಲ್ಲಿ ಅವಗಣನೆ ವಿರೋಧಿಸಿ ಅವರು ಬಿಜೆಪಿ ಸೇರ್ಪಡೆಗೆ ನಿರ್ಧರಿಸಿದ್ದಾರೆ ಎಂದು ಮೂಲ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net