ಕೃಷಿ ಮೇಳದಲ್ಲಿ ಕೆವಿಜಿ ಬ್ಯಾಂಕ್

9 Dwd 6
Published on

ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ ಕೃಷಿ ಮೇಳದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಮಳಿಗೆ ಸ್ಥಾಪಿಸಿದೆ. ಕೆವಿಜಿಬಿ ಹೊಸ ಖಾತೆ ತೆರೆಯಲು ಮತ್ತು ತುರ್ತು ನಗದು ಹಿಂಪಡೆಯುವ ವ್ಯವಸ್ಥೆ ಮಾಡಲಾಗಿದೆ.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಎಂ. ಭಂಡಿವಾಡ ಅವರು ಬ್ಯಾಂಕ್ ಮಳಿಗೆ ಉದ್ಘಾಟಿಸಿದರು.
ಮೈಕ್ರೋ ಫೈನಾನ್ಸ್ ಮತ್ತು ಹಣಕಾಸು ಸೇರ್ಪಡೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಂದರ್ಶಕರಿಗೆ ಪರಿಹಾರ ನೀಡಲಾಯಿತು. ಡಿಜಿಟಲ್ ಬ್ಯಾಂಕಿಂಗ್ ಉಪಕ್ರಮಗಳಾದ ಮೊಬೈಲ್ ಬ್ಯಾಂಕಿಂಗ್, ವಾಟ್ಸಾಪ್ ಬ್ಯಾಂಕಿಂಗ್, ಸಾಮಾಜಿಕ ಭದ್ರತಾ ಯೋಜನೆಗಳು, ಹಣಕಾಸು ಸೇರ್ಪಡೆ, ಕೃಷಿ ಅವಧಿ ಸಾಲ ಮತ್ತು ಪ್ಯಾರಾ ಬ್ಯಾಂಕಿಂಗ್ ಬಗ್ಗೆ ಮಾಹಿತಿ ನೀಡಲಾಯಿತು.
ಬ್ಯಾಂಕಿನ ಮಹಾಪ್ರಬಂಧಕರಾದ ವಿ. ತೆನ್ನರಸು, ಎನ್. ಸತ್ಯಪ್ರಸಾದ್, ಮಾರ್ಕೆಟಿಂಗ್ ಮುಖ್ಯ ಪ್ರಬಂಧಕ ಉಲ್ಲಾಸ ಗುನಗಾ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net