ಬಾಬಾ ಮಹಾರಾಜರ ಅದ್ದೂರಿ ರಥೋತ್ಸವ

25 kem 3
ಕೂಡಲಗಿ ಗ್ರಾಮದ ಶ್ರೀ ಶಾಂತಾನAದ ಸರಸ್ವತಿ ಸ್ವಾಮಿ ಬಾಬಾ ಮಹಾರಾಜ ಮಠದಲ್ಲಿ ಬಾಬಾ ಮಹಾರಾಜರ ಜಾತ್ರಾ ಮಹೋತ್ಸವ ನಿಮಿತ್ತ ಶುಕ್ರವಾರ ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರು.
Published on

ಕೆಂಭಾವಿ: ಕೂಡಲಗಿ ಗ್ರಾಮದ ಶ್ರೀ ಶಾಂತಾನAದ ಸರಸ್ವತಿ ಸ್ವಾಮಿ ಬಾಬಾ ಮಹಾರಾಜ ಮಠದಲ್ಲಿ ಶುಕ್ರವಾರ ಪೀಠಾಧಿಪತಿ ಶ್ರೀ ಉಮಾಕಾಂತ ಸಿದ್ಧರಾಜ ಬಾಬಾ ಮಹಾರಾಜರ ನೇತೃತ್ವದಲ್ಲಿ ಬಾಬಾ ಮಹಾರಾಜರ ಜಾತ್ರೋತ್ಸವ ಸಹಸ್ರ ಭಕ್ತರ ಮಧ್ಯೆ ಅದ್ದೂರಿಯಾಗಿ ಜರುಗಿತು.

ಬೆಳಗ್ಗೆ ಮಠದಲ್ಲಿ ಬಾಬಾ ಮಹಾರಾಜರ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿದವು. ಸಂಜೆ ೬ಕ್ಕೆ ಸಿಂಗಾರಗೊAಡ ರಥೋತ್ಸವದಲ್ಲಿ ಮಹಾರಾಜರ ಭಾವಚಿತ್ರದೊಂದಿಗೆ ಪೀಠಾಧಿಪತಿ ಶ್ರೀ ಉಮಾಕಾಂತ ಸಿದ್ಧರಾಜರು ಎರುತ್ತಿದ್ದಂತೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಕರ್ನಾಟಕ ಮಾತ್ರವಲ್ಲದೆ ನೆರೆಯ ಮಹಾರಾಷ್ಟç, ಆಂಧ್ರಪ್ರದೇಶ, ತೆಲಂಗಾಣದಿAದ ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಬಾಬಾ ಮಹಾರಾಜ ಕಿ ಜೈ ಎಂಬ ಘೋಷಣೆ ಕೂಗಿ ತಮ್ಮ ಭಕ್ತಿಯ ಪರಾಕಾಷ್ಠೆ ಮೆರೆದರು. ಸುಮಂಗಲಿಯರು ದೀಪದ ಕಳಸವನ್ನು ತಲೆ ಮೇಲೆ ಹೊತ್ತು ರಥದ ಮುಂದೆ ಸಾಗುತ್ತಿದ್ದ ದೃಶ್ಯ ಎಲ್ಲರನ್ನು ಆಕರ್ಷಿಸಿತು. ರಥೋತ್ಸವದ ನಂತರ ರಥಕ್ಕೆ ಭಕ್ತರು ಕಾಯಿ ಒಡೆಯುವ ಮೂಲಕ ತಮ್ಮ ಹರಕೆ ತೀರಿಸಿದರು. ಮಕ್ಕಳು ಜಾತ್ರೆಯಲ್ಲಿ ಆಟಿಕೆ ಸಾಮಾನುಗಳನ್ನು ಖರೀದಿಸಿಸುತ್ತಿರುವುದು ಸಾಮಾನ್ಯವಾಗಿತ್ತು. ಮಠದಿಂದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net