ವಿಜಯವಾಣಿಯ ನಾಲ್ವರು, ದಿಗ್ವಿಜಯ 24x7 ನ್ಯೂಸ್​ ಸಂಪಾದಕರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ

AWARD FINAL
Published on

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ವೃತ್ತಿ, ಸೇವೆ, ಸಾಧನೆ ಹಾಗೂ ಅತ್ಯುತ್ತಮ ವರದಿಗಳಿಗಾಗಿ ನೀಡುವ 2018ನೇ ಸಾಲಿನ ದತ್ತಿ ಪ್ರಶಸ್ತಿಗಳನ್ನು ಪ್ರಕಟಿಸಿದೆ.

ಈ ಬಾರಿ ವಿಜಯವಾಣಿ ಮತ್ತು ದಿಗ್ವಿಜಯ 24x7 ನ್ಯೂಸ್​ಗೆ 5 ಪ್ರಶಸ್ತಿಗಳು ಒಲಿದಿವೆ. ಹಿರಿಯ ವರದಿಗಾರ ಶ್ರೀಕಾಂತ್ ಶೇಷಾದ್ರಿಗೆ ಎಚ್.ಎಸ್. ರಂಗಸ್ವಾಮಿ, ವರದಿಗಾರ್ತಿ ಕೆ.ಎಂ.ಪಂಕಜಗೆ ನಾಡಪ್ರಭು ಕೆಂಪೇಗೌಡ, ನವೀನ್ ಕುಮಾರ್​ಗೆ ಅತ್ಯುತ್ತಮ ಪುಟ ವಿನ್ಯಾಸ ಹಾಗೂ ವಿಜಯಪುರ ವರದಿಗಾರ ಶಶಿಕಾಂತ್ ಮಂಡೇಗಾರಗೆ ಮಂಡಿಬೆಲೆ ಶಾಮಣ್ಣ ಪ್ರಶಸ್ತಿ ಘೋಷಿಸಲಾಗಿದೆ.

ಅಲ್ಲದೆ, ದಿಗ್ವಿಜಯ 24x7 ನ್ಯೂಸ್​ ಸಂಪಾದಕ ಎಂ.ಆರ್. ಸುರೇಶ್ ಅವರಿಗೆ ವಿಶೇಷ ಪ್ರಶಸ್ತಿ ಬಂದಿದೆ.

ಮಾ.7 ಮತ್ತು 8ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕುದ್ಲುಲ್ ರಂಗರಾವ್ ಪುರಭವನದಲ್ಲಿ ನಡೆಯುವ 35ನೇ ರಾಜ್ಯ ಕಾರ್ಯನಿರತ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net