ಕೆಯುಡಬ್ಲ್ಯುಜೆ ವಾರ್ಷಿಕ ದತ್ತಿ ಪ್ರಶಸ್ತಿ ಪರಸ್ಕೃತರಿಗೆ ಸನ್ಮಾನ

5
Published on

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯುಜೆ) ವಾರ್ಷಿಕ ದತ್ತಿ ಪ್ರಶಸ್ತಿ ಪುರಸ್ಕೃತರಾದ ವಿಜಯವಾಣಿ ಮೈಸೂರು ಬ್ಯೂರೋ ಮುಖ್ಯಸ್ಥ ಎಂ.ಆರ್.ಸತ್ಯನಾರಾಯಣ ಹಾಗೂ ‘ಮೈಸೂರು ಮಿತ್ರ ಮತ್ತು ‘ಸ್ಟಾರ್ ಆಫ್ ಮೈಸೂರು’ ಪತ್ರಿಕೆಯ ಮುಖ್ಯ ವರದಿಗಾರ ಎಸ್.ಟಿ.ರವಿಕುಮಾರ್ ಅವರನ್ನು ಮೈಸೂರು ಅಥ್ಲೆಟಿಕ್ಸ್ ಕ್ಲಬ್(ಎಂಎಸಿ) ವತಿಯಿಂದ ಸನ್ಮಾನಿಸಲಾಯಿತು.

ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಧರ್ಮಾ ಸಂಸ್ಕೃತ ಪತ್ರಿಕೆ ಸಂಪಾದಕಿ, ಪದ್ಮಶ್ರೀ ಪುರಸ್ಕೃತ ಜಯಲಕ್ಷ್ಮೀ ಅವರು ದತ್ತಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರನ್ನು ಸನ್ಮಾನಿಸಿದರು. ಜತೆಗೆ ಜಯಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು.

ಮೈಸೂರು ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ಸಿ.ಕೃಷ್ಣ, ಉಪಾಧ್ಯಕ್ಷ ಡಾ. ಜೈನ್‌ಸಿಂಗ್ ರಾಜ್‌ಪುರೋಹಿತ್, ಕಾರ್ಯದರ್ಶಿ ಮಾದಪ್ಪ ಯೋಗೇಂದ್ರ, ಜಂಟಿ ಕಾರ್ಯದರ್ಶಿಗಳಾದ ಮಹದೇವಯ್ಯ, ಎಚ್.ಆರ್.ರಾಮಸ್ವಾಮಿ, ಗುರು ರೆಸಿಡೆನ್ಸಿ ಹೋಟೆಲ್ ಮಾಲೀಕ ಗೋಪಾಲಕೃಷ್ಣ, ಪತ್ರಕರ್ತರಾದ ಶ್ರೀಧರ್, ಸತೀಶ್‌ಕುಮಾರ್, ನರಸಿಂಹಮೂರ್ತಿ, ಸಿ.ಕೆ.ಮುರಳೀಧರ್, ಆರ್.ಕೃಷ್ಣ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ವಿ.ಹೆಗಡೆ, ಉಪಾಧ್ಯಕ್ಷ ಆನಂದ ಶೆಟ್ಟಿ, ಚಂದ್ರಶೇಖರ್, ಜವರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net