ಎಲ್ಲ ಪ್ರಾಕಾರಗಳಲ್ಲೂ ಸಾಹಿತ್ಯ ರಚಿಸಿದ ಕುವೆಂಪು

 ಹುಣಸೂರು ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಕಸಾಪ ವತಿಯಿಂದ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಕಸಾಪ ತಾಲೂಕು ಅಧ್ಯಕ್ಷ ಎಚ್.ಕೆ.ಮಹದೇವ್, ಹಂದನಹಳ್ಳಿಸೋಮಶೇಖರ್, ಜೆ.ಮಹದೇವ್, ಹೊಸೂರು ಕುಮಾರ್, ಟಿ.ಲೋಕೇಶ್, ಕುಮಾರ್ ಅರಸೇಗೌಡ ಇದ್ದರು.
ಹುಣಸೂರು ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಕಸಾಪ ವತಿಯಿಂದ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಕಸಾಪ ತಾಲೂಕು ಅಧ್ಯಕ್ಷ ಎಚ್.ಕೆ.ಮಹದೇವ್, ಹಂದನಹಳ್ಳಿಸೋಮಶೇಖರ್, ಜೆ.ಮಹದೇವ್, ಹೊಸೂರು ಕುಮಾರ್, ಟಿ.ಲೋಕೇಶ್, ಕುಮಾರ್ ಅರಸೇಗೌಡ ಇದ್ದರು.
Published on

ಹುಣಸೂರು: ರಾಷ್ಟ್ರಕವಿ ಕುವೆಂಪು ಎಲ್ಲ ತರ್ಕ, ವಿಮರ್ಶೆಗಳಿಂದ ದೂರ ನಿಲ್ಲುವ ವಿರಾಟ್ ಪ್ರತಿಭೆಯಾಗಿದ್ದಾರೆ ಎಂದು ಸಾಹಿತಿ ಮತ್ತು ಶಿಕ್ಷಕ ಜೆ.ಮಹದೇವ್ ಅಭಿಪ್ರಾಯಪಟ್ಟರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್(ಕಸಾಪ)ವತಿಯಿಂದ ಭಾನುವಾರ ನಗರದ ಸಾರ್ವಜನಿಕ ಗ್ರಂಥಾಲಯ ಕಚೇರಿಯಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು. ಕುವೆಂಪು ಕನ್ನಡದ ಬೆಳಕನ್ನು ಬೆಳಗಿದ ಜಗದ ಕವಿ, ಯುಗದ ಕವಿಯಾಗಿದ್ದಾರೆ. ಕಥೆ, ಕವಿತೆ, ಕಾದಂಬರಿ, ಮಕ್ಕಳ ಸಾಹಿತ್ಯ ಸೇರಿದಂತೆ ಎಲ್ಲ ಪ್ರಾಕಾರಗಳಲ್ಲೂ ಸಾಹಿತ್ಯ ರಚನೆ ಮಾಡಿದ್ದಾರೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಶೋಷಿತ, ದಮನಿತ ಮತ್ತು ಬಲಹೀನರ ಪರವಾದ ದನಿಯನ್ನು ಕುವೆಂಪು ತಮ್ಮ ಸಾಹಿತ್ಯದಲ್ಲೂ ತೋರುವ ಮೂಲಕ ಜನಪರ ಕಾಳಜಿ ಹೊಂದಿದ್ದರು ಎಂದು ಸ್ಮರಿಸಿದರು.

ಗ್ರಂಥಪಾಲಕ ಎ.ಎಂ.ಸತೀಶ್, ಕಸಾಪ ಜಿಲ್ಲಾಘಟಕದ ಉಪಾಧ್ಯಕ್ಷ ಗಣೇಶ್ ನಿಲುವಾಗಿಲು ಮತ್ತು ಭರತನಾಟ್ಯ ಕಲಾವಿದೆ ಇಂಚರಾ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಎಚ್.ಕೆ.ಮಹದೇವ್ ಆಶಯದ ನುಡಿಗಳನ್ನಾಡಿದರು. ಮುಖಂಡರಾದ ಹಂದನಹಳ್ಳಿ ಸೋಮಶೇಖರ್, ಕೃಷ್ಣಕುಮಾರ್, ಎಸ್.ಜಯರಾಂ, ಟಿ.ಲೋಕೇಶ್, ಕೆ.ನಂಜುಂಡಸ್ವಾಮಿ, ಕುಮಾರ್ ಅರಸೇಗೌಡ, ಲಕ್ಷ್ಮೀಕಾಂತ್, ಸಿ,ಎಸ್.ಮಹೇಶ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net