ಕುವೆಂಪು ವಿವಿ ಅಂತಿಮ ಪದವಿ ಪರೀಕ್ಷೆ ಮುಂದೂಡಿ

17sgr1
ಅಂತಿಮ ವರ್ಷದ ಪದವಿ ಪರೀಕ್ಷೆಯನ್ನು ಮುಂದೂಡುವAತೆ ಆಗ್ರಹಿಸಿ ವಿದ್ಯಾರ್ಥಿ ಒಕ್ಕೂಟದ ಪದಾಽಕಾರಿಗಳು ಸಾಗರ ಉಪವಿಭಾಗಾಽಕಾರಿಗಳಿಗೆ ಮನವಿ ಸಲ್ಲಿಸಿದರು. ಸ್ವಸ್ತಿಕ್, ಡಿ.ಕೆ.ಅಕ್ಷಯ, ಎಚ್.ಪಿ.ಮನೋಜ್, ಸಿ.ರಕ್ಷಿತ್ ಇತರರಿದ್ದರು.
Published on

ಸಾಗರ: ಕುವೆಂಪು ವಿಶ್ವವಿದ್ಯಾಲಯ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ ೯ರಿಂದ ೧೧ರವರೆಗೆ ನಿಗದಿಪಡಿಸಿರುವ ಪರೀಕ್ಷೆಯನ್ನು ಮುಂದೂಡಿ, ಹೊಸ ವೇಳಾಪಟ್ಟಿಯನ್ನು ಪ್ರಕಟಿಸುವಂತೆ ಒತ್ತಾಯಿಸಿ ಶಿವಮೊಗ್ಗ ವಿದ್ಯಾರ್ಥಿ ಒಕ್ಕೂಟದ ಪದಾಽಕಾರಿಗಳು ಸಾಗರ ಉಪವಿಭಾಗಾಽಕಾರಿಗಳ ಮೂಲಕ ಕುಲಪತಿಗಳಿಗೆ ಗುರುವಾರ ಮನವಿ ಸಲ್ಲಿಸಿದರು.

ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಎಂ.ಚಿನ್ಮಯ್ ಮಾತನಾಡಿ, ಕುವೆಂಪು ವಿವಿ ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟವಾಡುತ್ತಿದೆ. ಅವೈಜ್ಞಾನಿಕ ನಿರ್ಧಾರದ ಮೂಲಕ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿದೆ. ಸೆ.೯ರಿಂದ ೧೧ರವರೆಗೆ ಪಿಜಿಸಿಇಟಿ ಪರೀಕ್ಷೆ ಇದ್ದು ಅದೇ ವೇಳೆ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುತ್ತಿದೆ ಎಂದು ದೂರಿದರು.
ಪಿಜಿಸಿಇಟಿ ಪರೀಕ್ಷೆಯು ಹೆಚ್ಚಾಗಿ ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ನಡೆಯಲಿದೆ. ಪಿಜಿಸಿಇಟಿ ನಡೆಯುವ ಸೆ.೯ ಮತ್ತು ೧೧ರಂದು ವಿಶ್ವವಿದ್ಯಾಲಯ ಅಂತಿಮ ಪದವಿಯ ಪರೀಕ್ಷೆ ವೇಳಾಪಟ್ಟಿ ಪ್ರಕಟ ಮಾಡಿದೆ. ಬಹುತೇಕ ವಿದ್ಯಾರ್ಥಿಗಳು ಪಿಜಿಸಿಇಟಿ ಪರೀಕ್ಷೆಗೆ ಪಾಲ್ಗೊಳ್ಳಬೇಕಾಗಿರುವುದರಿಂದ ಪದವಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ತಕ್ಷಣ ಘೋಷಣೆ ಮಾಡಿರುವ ಪರೀಕ್ಷೆಯನ್ನು ಮುಂದೂಡಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ಜಿಲ್ಲಾದ್ಯಂತ ಹೋರಾಟ ರೂಪಿಸಲಾಗುವುದು. ಜತೆಗೆ ವಿಶ್ವವಿದ್ಯಾಲಯ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಸ್ವಸ್ತಿಕ್, ಡಿ.ಕೆ.ಅಕ್ಷಯ, ಎಚ್.ಪಿ.ಮನೋಜ್, ಸಿ.ರಕ್ಷಿತ್, ಎಂ.ಜ್ಯೋತಿ, ವಿ.ಲಿಖಿತಾ, ಸ್ವಾತಿ, ಧನ್ಯಶ್ರೀ, ಲತಾ, ಜೆ.ಎಸ್.ಅಭಿರಾಮ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net