ಕುವೆಂಪು ಧರ್ಮಗಳಲ್ಲಿನ ಮೂಢನಂಬಿಕೆ ವಿರೋಧಿಸಿದರೂ ಆಧ್ಯಾತ್ಮವನ್ನು ನಿರಾಕರಿಸಲಿಲ್ಲ: ಶಂಕರ್ ನಾಯ್ಕ

30sor6
ಸೊರಬ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ, ಐ.ಕ್ಯೂ.ಎ.ಸಿ.ವತಿಯಿಂದ ಹಮ್ಮಿಕೊಂಡಿದ್ದ ದತ್ತಿ ನಿಧಿ ಕಾರ್ಯಕ್ರಮವನ್ನು ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಪಾಣಿ ಉದ್ಘಾಟಿಸಿದರು.
Published on

ಸೊರಬ: ಕುವೆಂಪು ಅವರ ಸಾಹಿತ್ಯದಲ್ಲಿ ಮಲೆನಾಡಿನ ದಟ್ಟವಾದ ಚಿತ್ರಣವನ್ನು ಕಟ್ಟಿಕೊಡುವ ಮೂಲಕ ಸಾಹಿತ್ಯದ ಮಜಲುಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದರು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಶಂಕರ್ ನಾಯ್ಕ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಸಾಪ, ಐಕ್ಯೂಎಸಿ ವತಿಯಿಂದ ಹಮ್ಮಿಕೊಂಡಿದ್ದ ದತ್ತಿ ನಿಧಿ ಕಾರ್ಯಕ್ರಮ ಹಾಗೂ ವಿಶ್ವ ಮಾನವ ದಿನಾಚರಣೆಯಲ್ಲಿ ಕುವೆಂಪು ಅವರ ಸಾಹಿತ್ಯದ ಪ್ರಕಾರಗಳು ಕುರಿತು ಉಪನ್ಯಾಸ ನೀಡಿದರು.
ಕುವೆಂಪುರವರ ಸಾಹಿತ್ಯದಲ್ಲಿ ನಿಸರ್ಗ ಪ್ರೇಮವಿತ್ತು. ಧರ್ಮಗಳಲ್ಲಿನ ಮೂಢನಂಬಿಕೆ ವಿರೋಧಿಸಿದರೂ ಆಧ್ಯಾತ್ಮವನ್ನು ನಿರಾಕರಿಸಲಿಲ್ಲ. ಕನ್ನಡದ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುವ, ಸಾಹಿತ್ಯದ ಕೃಷಿ ತಿಳಿಸುವ ಪ್ರಯತ್ನ ಮಾಡಿದ್ದರು. ಅವರ ವ್ಯಕ್ತಿತ್ವ, ಬರಹಗಳು ಎಂದಿಗೂ ಸಾರ್ವಕಾಲಿಕ ಎಂದರು.
ಸರ್ಕಾರಿ ಉರ್ದು ಪ್ರೌಢಶಾಲೆಯ ಶಿಕ್ಷಕ ಪಾಲಾಕ್ಷಪ್ಪ ಉಪನ್ಯಾಸ ನೀಡಿ, ಕುವೆಂಪು ಅವರ ಸಾಹಿತ್ಯದಲ್ಲಿನ ವೈಚಾರಿಕತೆಯ ಮೌಲ್ಯಗಳನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಕುವೆಂಪು ಯಾವುದೇ ಒಂದು ಸಾಹಿತ್ಯಕ ವರ್ಗಕ್ಕೆ ಸೀಮಿತವಾಗದೆ ಕಥೆ, ಕಾದಂಬರಿ, ಮಹಾಕಾವ್ಯಗಳ ಕೊಡುಗೆ ನೀಡಿದ್ದಾರೆ. ವಿದ್ಯಾರ್ಥಿಗಳು ಸಾಹಿತ್ಯವನ್ನು ಸೃಜಿಸುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಭಾರ ಪ್ರಾಚಾರ್ಯ ಡಾ. ಜೋಶಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ಬೆಳೆಸಿಕೊಳ್ಳಬೇಕು. ಕುವೆಂಪು ಅವರ ಸಾಹಿತ್ಯದ ಸೃಜನಾತ್ಮಕ ಅಂಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಪಾಣಿ ಕಾರ್ಯಕ್ರಮ ಉದ್ಘಾಟಿಸಿದರು. ಡಾ. ಶೋಯಬ್ ಅಹ್ಮದ್, ತಾಲೂಕು ಕಸಾಪ ಕಾರ್ಯದರ್ಶಿ ರಮೇಶ್, ವಿನಾಯಕ ಕಾನಡೆ, ವಿನೋದ್ ವಾಲ್ಮೀಕಿ, ಸೌಭಾಗ್ಯಾ, ರವಿಕಲ್ಲಂಬಿ, ರಾಜಶೇಖರ ಗೌಡ, ಡಾ. ದಿಲೀಪ್, ಮಧುರಯಾಧವ್ ಸೇರಿದಂತೆ ಇತರರಿದ್ದರು. ಜಯಲಕ್ಷ್ಮೀ ಮತ್ತು ಕೋಮಲಾ ಪ್ರಾರ್ಥಿಸಿದರು. ಸಹನಾ ಸ್ವಾಗತಿಸಿದರು. ಅಮೃತಾ ನಿರೂಪಿಸಿದರು. ಚಂದನಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net