ಮನುಕುಲಕ್ಕೆ ವಿಶ್ವಮಾನವ ತತ್ವ ಸಾರಿದ ರಾಷ್ಟ್ರಕವಿ

Oplus_16908288
ಹೊಳೆನರಸೀಪುರದ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದಿಂದ ಆಯೋಜಿಸಿದ್ದ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಗಣ್ಯರು ಕುವೆಂಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಿವೇದಿತಾ ಮಹಾಂತೇಶ್ ಮುನವಳ್ಳಿಮಠ್, ಚೇತನಾ, ಎಂ.ವಿ.ಶಿವಕುಮಾರ್, ಉದಯರಂಜನ್, ಶೇಖರಪ್ಪ ಇದ್ದರು.
Published on

ಹೊಳೆನರಸೀಪುರ: ವಿಶ್ವಮಾನವ ತತ್ವಗಳನ್ನು ಮನುಕುಲಕ್ಕೆ ಸಾರಿದ ರಾಷ್ಟ್ರಕವಿ ಕುವೆಂಪು ಅವರ ಬದುಕು, ಬರಹ ಹಾಗೂ ಆದರ್ಶಗಳು ಸರ್ವರಿಗೂ ದಾರಿದೀಪವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ನಿವೇದಿತಾ ಮಹಾಂತೇಶ್ ಮುನವಳ್ಳಿಮಠ್ ಅಭಿಪ್ರಾಯಪಟ್ಟರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಶನಿವಾರ ತಾಲೂಕು ವಕೀಲರ ಸಂಘದಿಂದ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿಗೆ ಕುವೆಂಪು ಕೊಡುಗೆ ಅಮೂಲ್ಯವಾಗಿದೆ. ಅವರ ಆದರ್ಶಗಳನ್ನು ಪಾಲನೆ ಮಾಡುತ್ತಾ, ಹೊಸ ವರ್ಷ ಎಲ್ಲರಿಗೂ ಶುಭ ಉಂಟು ಮಾಡಲಿ ಎಂದು ಶುಭಾಶಯ ಕೋರಿದರು.

ಸಿವಿಲ್ ನ್ಯಾಯಾಧೀಶರಾದ ಚೇತನಾ ಮಾತನಾಡಿ, ಮೈಸೂರಿನ ಮಾನಸಗಂಗೋತ್ರಿ ರಾಷ್ಟ್ರಕವಿ ಕುವೆಂಪು ಅವರ ಕನಸಿನ ಕೂಸು. ಜತೆಗೆ ತಾರತಮ್ಯ ಹೋಗಲಾಡಿಸಲು ಹಲವಾರು ರೀತಿಯ ಮಾರ್ಗದರ್ಶನಗಳನ್ನು ನೀಡಿದ್ದರು. ಕುವೆಂಪು ಅವರು ಪಡೆದ ರಾಷ್ಟ್ರಕವಿ, ಪದ್ಮಭೂಷಣ, ಜ್ಞಾನಪೀಠ, ಪಂಪ ಪ್ರಶಸ್ತಿ, ಪದ್ಮ ವಿಭೂಷಣ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿಗಳು ಅವರಲ್ಲಿದ್ದ ಜ್ಞಾನ, ಪಂಡಿತ್ಯ, ಹೃದಯ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ. ಇಂದಿನ ಪೀಳಿಗೆಗೆ ನೀಡಿದ ವಿಚಾರಧಾರೆಗಳು, ಆದರ್ಶಗಳು ಹಾಗೂ ವ್ಯಕ್ತಿತ್ವದ ಪಾಲನೆ ಮಾಡೋಣ ಎಂದರು.

ವಕೀಲರ ಸಂಘದ ತಾಲೂಕು ಅಧ್ಯಕ್ಷ ಎಂ.ವಿ.ಶಿವಕುಮಾರ್, ಉದಯರಂಜನ್ ಹಾಗೂ ಎಚ್.ಎಸ್.ಅರುಣ್ ಕುಮಾರ್ ಮಾತನಾಡಿದರು. ಜಯಪ್ರಕಾಶ್, ಬಿ.ಎನ್.ಕೃಷ್ಣಮೂರ್ತಿ, ಹಿರಿಯ ವಕೀಲರಾದ ರಾಮಪ್ರಸನ್ನ, ಪುರುಷೋತಮ್, ರವೀಶ್, ಸಿ.ಎಂ.ಅಶೋಕ್, ಯು.ಆರ್.ಸತೀಶ್, ಮೈತ್ರಿ ಕೆ.ಎನ್., ಕೆ.ಎಸ್.ಪ್ರಕಾಶ್, ಕೆ.ಆರ್.ಸುನೀಲ್, ರಾಜಶೇಖರ್, ಶ್ವೇತಾ, ಸುನೀಲ್, ರಾಮಪ್ರಸಾದ್, ಶಿವಕುಮಾರ್, ಮಂಜುನಾಥ್, ನವೀನ್, ಶಿವಣ್ಣ, ಶೇಖರಪ್ಪ, ಶಶಿಕುಮಾರ್, ಲಾವಣ್ಯ, ಆಶಾಕುಮಾರಿ, ಆಶಾರಾಣಿ, ಸಂಗೀತಾ, ರಾಣಿ, ಜ್ಯೋತಿ, ಅನುಷಾ, ಚಂದ್ರಶೇಖರ್, ರಾಘವೇಂದ್ರ, ಪ್ರವೀಣ್, ಕೃಷ್ಣಮೂರ್ತಿ, ಪುನೀತ್, ಪ್ರಶಾಂತ್, ಕೃಷ್ಣೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net