ಕುವೆಂಪು ಕನ್ನಡ ಪ್ರೇಮ ಎಲ್ಲರಿಗೂ ಮಾದರಿ: ನಿವೃತ್ತ ಪ್ರಾಂಶುಪಾಲ ಡಾ.ಎಚ್.ಎಸ್.ಮುದ್ದೇಗೌಡ ಹೇಳಿಕೆ

Kuvempu Janmadina)
Published on

ಮಂಡ್ಯ: ರಾಷ್ಟ್ರಕವಿ ಕುವೆಂಪು ಅವರ ವೈಚಾರಿಕತೆ ಹಾಗೂ ಜಗದ ನಡವಳಿಕೆಯನ್ನು ಕವನಗಳ ಮೂಲಕ ಪ್ರಶ್ನಿಸುವ ಶೈಲಿ ಅನನ್ಯ. ಅವರ ಕನ್ನಡ ಪ್ರೇಮ ನಮಗೆಲ್ಲರಿಗೂ ಮಾದರಿಯಾಗಬೇಕು ಎಂದು ಪಿಇಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಎಚ್.ಎಸ್.ಮುದ್ದೇಗೌಡ ಅಭಿಪ್ರಾಯಪಟ್ಟರು.

ನಗರದ ಕೆ.ವಿ.ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕುವೆಂಪು ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನವೀಯತೆಯ ಉದ್ದೇಶ ಮಾನವ ಧರ್ಮವನ್ನು ಬೆಳೆಸುವುದಾಗಿದೆ. ಕುವೆಂಪು ಅವರ ರಾಮಾಯಣ ದರ್ಶನಂ ಕೃತಿಯಲ್ಲಿ ಕಂಡುಬರುವ ಪಾಪಿಗುದ್ಧಾರಮಿಹುದು ಸೃಷ್ಟಿಯ ಬೃಹತ್ ವ್ಯೆಹ ರಚನೆಯೊಳ್ ಎಂಬ ಸಾಲು ಅವರ ವೈಚಾರಿಕ ಚಿಂತನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ.ವಿ.ಡಿ.ಸುವರ್ಣ ಮಾತನಾಡಿ, ಉತ್ತಮ ಕವಿಯಾದವರು ಬರೆದಂತೆ ಬದುಕು ಹಾಗೂ ಬದುಕಿದಂತೆ ಬರೆಯುವವರಾಗಿರುತ್ತಾರೆ ಎಂಬ ಮಾತಿಗೆ ಕುವೆಂಪು ಅವರು ಸರ್ವಕಾಲಕ್ಕೂ ಮಾದರಿಯಾಗಿ ನಿಲ್ಲುವರು. ಅಧ್ಯಯನಶೀಲತೆ ಅವರ ಬರಹಗಳಲ್ಲಿ ಬಹು ಸ್ಪಷ್ಟವಾಗಿ ನಿಲುಕುತ್ತದೆ ಎಂದರು.

ಭಾಷಾ ಸಂಘದ ಸಂಚಾಲಕರಾದ ವಿಕ್ಟೋರಿಯಾ ರೋಚ್, ಡಾ.ಎಂ.ವರುಣ್, ಡಾ.ಚನ್ನಕೃಷ್ಣಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net