

ಬಣಕಲ್: ಕುವೆಂಪು ಅವರು ವಾಸ್ತವತೆ ಕುರಿತು ನೇರವಾಗಿ ತಮಗೆ ಅನಿಸಿದನ್ನು ವ್ಯಕ್ತಪಡಿಸುತ್ತಿದ್ದರು. ಜಾತಿ, ಧರ್ಮ,ಮೇಲು-ಕೀಳು ಎಂಬ ತಾರತಮ್ಯಗಳನ್ನು ಕಟುವಾಗಿ ಟೀಕಿಸಿ ತಮ್ಮ ಬರಹಗಳ ಮೂಲಕ ವಿರೋಧಿಸಿದರು. ವಿಶ್ವಮಾನವ ಸಂದೇಶವನ್ನು ವಿಶ್ವಕ್ಕೆ ಸಾರಿ ಮಾದರಿಯಾದರು ಎಂದು ಬಣಕಲ್ ಠಾಣೆ ಸಬ್‌ಇನ್ಸ್ಪೆಕ್ಟರ್ ರೇಣುಕಾ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ ಬಣಕಲ್ ಹೋಬಳಿ ಘಟಕದಿಂದ ಕೊಟ್ಟಿಗೆಹಾರ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿರು.
ಶಿಕ್ಷಕ ಭಕ್ತೇಶ್ ಉಪನ್ಯಾಸ ನೀಡಿ, ಕುವೆಂಪು ತಾವು ಬದುಕಿದಂತೆ ಬರೆದವರು, ನುಡಿದಂತೆ ನಡೆದ ತತ್ವಜ್ಞಾನಿ. ಪ್ರಕೃತಿ ಪ್ರೇಮ, ಮಾನವ ಪ್ರೇಮ ಹೊಂದಿದ್ದ ಕುವೆಂಪು ಅವರು ಈ ಜಗತ್ತು ಕಂಡ ಶ್ರೇಷ್ಠ ಕವಿ, ಚಿಂತಕ,ಮಹಾ ಮಾನವತವಾದಿಯಾಗಿದ್ದರು. ಮಲೆನಾಡನ್ನು ತಾಯಿನಾಡು, ಕಾಡನ್ನು ದೇವರ ಬೀಡು ಎಂದು ಬಣ್ಣಿಸಿದ್ದಾರೆ. ತಮ್ಮ ವಿಶಿಷ್ಟ ಬರವಣಿಗೆ ವೈಚಾರಿಕ ಚಿಂತನೆ ಕಾವ್ಯ ಕಲ್ಪನೆ ಮೂಲಕ ಮಲೆನಾಡಿನ ಸೌಂದರ್ಯದ ಸೊಬಗನ್ನು ವರ್ಣಿಸುವ ಮೂಲಕ ಕನ್ನಡದ ವಿಲಿಯಂ ವರ್ಡ್ಸ್ ವರ್ಥ್ ಎಂದು ಪ್ರಸಿದ್ದರಾಗಿದ್ದಾರೆ ಎಂದು ತಿಳಿಸಿದರು.
ಸಮಾಜ ಸೇವಕ ಬಣಕಲ್ ಆರ್ೀಗೆ ವಿಶ್ವಮಾನವ ಪ್ರಶಸ್ತಿ, ಪಶು ವೈದ್ಯ ನಾಗರಾಜ್‌ಗೆ ಕುವೆಂಪು ಸಿರಿ ಪ್ರಶಸ್ತಿ, ಗಾಯಕ ಬಕ್ಕಿ ಮಂಜುನಾಥ್‌ಗೆ ಕುವೆಂಪು ಸಾಹಿತ್ಯ ಗಾನ ಸಿರಿ ಪ್ರಶಸ್ತಿ ನೀಡಿ ಗೌವಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದ ಅಧ್ಯಕ್ಷ ಲೋಕೇಶ್ ಬೆಟ್ಟಗೆರೆ, ಮುಖ್ಯಶಿಕ್ಷಕ ಭಾಗ್ಯಾ, ಎಸ್‌ಡಿಎಂಸಿ ಸದಸ್ಯ ಸಂಜಯ್ ಕೊಟ್ಟಿಗೆಹಾರ, ಕಿರಿಯ ಪಶು ವೈದ್ಯಕೀಯ ಪರೀಕ್ಷ ಮಂಜುನಾಥ್ ರಾಥೋಡ್, ಕೋಶಾಧ್ಯಕ್ಷ ರಾಮಚಂದ್ರ, ಪ್ರಧಾನ ಸಂಚಾಲಕ ಸುಪ್ರೀತ್ ಬೆಟ್ಟಗೆರೆ, ಯುವ ಸಾಹಿತಿ ಪೂರ್ಣೇಶ್ ಹೆಬ್ಬರಿಗೆ, ಯುವ ಸಾಹಿತಿ ಹೆಸಗಲ್ ವೆಂಕಟೇಶ್ ಇದ್ದರು.