ಕನ್ನಡದ ಅಗ್ರಮಾನ್ಯ ಕಾದಂಬರಿಕಾರ ಕುವೆಂಪು

2 NRD 1
Published on

ನರಗುಂದ: ಕುವೆಂಪು ಅವರು ಕನ್ನಡದ ಅಗ್ರಮಾನ್ಯ ಕಾದಂಬರಿಕಾರ. ಜತೆಗೆ ಅವರ ಹಲವಾರು ಮೌಲಿಕ ಕವನಗಳು ಕನ್ನಡಿಗರ ಮನದಾಳದಲ್ಲಿ ಅಚ್ಚಳಿಯದೆ ಉಳಿದಿವೆ. ವರಕವಿ ಡಾ.ದ.ರಾ.ಬೇಂದ್ರೆ ಅವರಿಂದ ಯುಗದ ಕವಿ ಜಗದ ಕವಿ ಎನಿಸಿಕೊಂಡ ಅವರು ವಿಶ್ವಮಾನವ ಸಂದೇಶ ನೀಡಿದ ಕನ್ನಡದ 2ನೇ ರಾಷ್ಟ್ರ ಕವಿ ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳಿದರು.

ಕುವೆಂಪು ಅವರ ಜಯಂತಿ ಪ್ರಯುಕ್ತ ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಆಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವಮಾನವ ದಿನಾಚರಣೆ, ಏಕೀಕರಣ ಯೋಧರ ಯಶೋಗಾಥೆ-42ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡಕ್ಕೆ ಪ್ರಪ್ರಥಮವಾಗಿ ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ. ಕುವೆಂಪು ಅವರ ಸಾಹಿತ್ಯದ ಕಾಲಘಟ್ಟವನ್ನು ಕ್ರಾಂತಿಕಾರಕ ಸಂಧಿಕಾಲ ಎನ್ನಬಹುದು. ವೈಚಾರಿಕ ಚಿಂತನೆಗಳೊಂದಿಗೆ ಸಮಾಜದಲ್ಲಿ ಭಾವೈಕ್ಯದ ಸಂದೇಶವನ್ನು ಸಾರಿದ ಅವರ ಚಿಂತನೆಗಳು ಸರ್ವಕಾಲಿಕ ಎಂದು ಹೇಳಿದರು.

ಬಸಯ್ಯ ಶಾಸ್ತ್ರಿಗಳು ಮಾತನಾಡಿದರು. ನಾಗಯ್ಯ ಶಿರಹಟ್ಟಿಮಠ, ಮೃತ್ಯುಂಜಯ್ಯ ಹಿರೇಮಠ, ಶಿವಕುಮಾರ ಹಿರೇಮಠ, ನಿವೃತ್ತ ಉಪ ತಹಸೀಲ್ದಾರ್ ವಿ.ಜಿ.ಐನಾಪೂರ, ಹೆಸ್ಕಾಂ ಇಂಜಿನಿಯರ್ ವಿಶ್ವನಾಥ ಶಿರಹಟ್ಟಿಮಠ, ಮಹಾಂತೇಶ ಬೆಟಗೇರಿ, ಪ್ರಮೋದ ಶಿರಹಟ್ಟಿಮಠ, ಗಿರೀಶ ಉಪಸ್ಥಿತರಿದ್ದರು. ಮಠದ ವ್ಯವಸ್ಥಾಪಕ ಮಹಾಂತೇಶ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net