ಮಧುರಾ ಗಾಂವ್ಕರಗೆ ಕುವೆಂಪು ಪ್ರಶಸ್ತಿ ಪ್ರದಾನ

25 ylp 02 (madhura) award
Published on

ಯಲ್ಲಾಪುರ: ತಾಲೂಕಿನ ವಾಗಳ್ಳಿಯ ಕವಯಿತ್ರಿ, ಹವ್ಯಾಸಿ ಯಕ್ಷಗಾನ ಕಲಾವಿದೆ, ಕಲಾ ಕೌಸ್ತುಭ ಸಂಸ್ಥೆಯ ಅಧ್ಯಕ್ಷೆ ಮಧುರಾ ಗಾಂವ್ಕರ ಅವರಿಗೆ ಅಕ್ಷರನಾದ ಕಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಪಬ್ಲಿಕೇಶನ್ ವತಿಯಿಂದ ನೀಡುವ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಭವನದ ಅಕ್ಕಮಹಾದೇವಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕವಿ ಸಂಭ್ರಮೋತ್ಸವ ಮತ್ತು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಾಜ್ಯದ ನೂರಾರು ಕವಿಗಳ ಆಯ್ದ ಕವನಗಳ ಸಂಕಲನವಾದ ‘ಭಾವ ಮಂಜುಷಾ’ ಪುಸ್ತಕವನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು. ಈ ಪುಸ್ತಕಕ್ಕೆ ಮಧುರಾ ಗಾಂವ್ಕರ ಬೆನ್ನುಡಿ ಬರೆದು, ಕವನ ಸಂಕಲನಕ್ಕೆ ಹೆಸರು ಸೂಚಿಸಿದ್ದರು. ಪಬ್ಲಿಕೇಷನ್ ರಾಜ್ಯಾಧ್ಯಕ್ಷೆ ಶ್ರುತಿ ಮಧುಸೂದನ್ ರುದ್ರಾಗ್ನಿ ಹಾಗೂ ಪದಾಧಿಕಾರಿಗಳು ಮಧುರಾ ಗಾಂವ್ಕರ ಅವರಿಗೆ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ನೀಡಿ ಗೌರವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net