ಮಸ್ಕತ್‌ನಲ್ಲಿ ಬ್ಯಾರಿ ಗೌಜಿ ಗಮ್ಮತ್ ಕುಟುಂಬ ಸಮ್ಮಿಲನ

mng_2 feb byari
ಮಸ್ಕತ್‌ನಲ್ಲಿ ಬ್ಯಾರಿ ಗೌಜಿ ಗಮ್ಮತ್ ಕುಟುಂಬ ಸಮ್ಮಿಲನಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ಪದ್ಮಶ್ರೀ ಪುರಸ್ಕೃತ ಅಕ್ಷರಸಂತ ಹರೇಕಳ ಹಾಜಬ್ಬ ಅವರನ್ನು ಮಸ್ಕತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
Published on

ಮಂಗಳೂರು: ಇಂಡಿಯನ್ ಸೋಶಿಯಲ್ ಕ್ಲಬ್ ಒಮಾನ್ ಇದರ ಬ್ಯಾರಿ ವಿಂಗ್ ವತಿಯಿಂದ ಮಾ.3ರಂದು ಶುಕ್ರವಾರ ಬ್ಯಾರಿ ಗೌಜಿ ಗಮ್ಮತ್ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಆಗಮಿಸಿದ ಪದ್ಮಶ್ರೀ ಪುರಸ್ಕೃತ ಅಕ್ಷರಸಂತ ಹರೇಕಳ ಹಾಜಬ್ಬ ಅವರನ್ನು ಮಸ್ಕತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಬ್ಯಾರಿ ವಿಂಗ್ ಪದಾಧಿಕಾರಿಗಳಾದ ಮೋನಬ್ಬ ಬ್ಯಾರಿ, ಸುಹೈಲ್, ಮುಹಮ್ಮದ್ ಮಸೂದ್, ಸಹಾಬುದ್ದೀನ್, ಅಬ್ದುಲ್ ರಹ್ಮಾನ್, ಮುಂತಾದವರು ಉಪಸ್ಥಿತರಿದ್ದರು. ಗೌಜಿ ಗಮ್ಮತ್ ಕಾರ್ಯಕ್ರಮವು ಮಸ್ಕತ್ ನ ಬರ್ಕ ನಗರದ ಫಿರ್ದೌಸ್ ಫಾರ್ಮ್ ಹೌಸ್ ನಲ್ಲಿ ಮಾ.3ರ ಸಂಜೆ 4ಗಂಟೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಹರೇಕಳ ಹಾಜಬ್ಹರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಬ್ಯಾರಿ ಸಾಂಪ್ರದಾಯಿಕ ತಿಂಡಿ ತಿನಿಸು, ಆಟೋಟ ಸ್ಪರ್ಧೆ, ದಫ್ ಒಪ್ಪನ ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net