ಮಾದಾಪುರದಲ್ಲಿ ಕುಟ್ಟಪ್ಪರವರ ಸ್ಮರಣೆ ಕಾರ್ಯಕ್ರಮ

10adarshkdga2
Published on

ಮಡಿಕೇರಿ: ೨೦೧೫ರ ನ.೧೦ ರಂದು ಟಿಪ್ಪು ಜಯಂತಿ ಸಂದರ್ಭ ನಡೆದ ಗಲಭೆಯಲ್ಲಿ ಮೃತಪಟ್ಟ ವಿಶ್ವ ಹಿಂದೂ ಪರಿಷತ್ ಪ್ರಮುಖ ದೇವಪ್ಪಂಡ ಕುಟ್ಟಪ್ಪರವರ ಸ್ಮರಣೆ ಕಾರ್ಯಕ್ರಮ ಮಾದಾಪುರದಲ್ಲಿ ಗುರುವಾರ ನಡೆಯಿತು.


ಶ್ರೀಗಣಪತಿ ದೇವಾಲಯದ ಸಭಾಂಗಣದಲ್ಲಿ ಹಿಂದೂ ಜಾಗರಣಾ ವೇದಿಕೆ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಪ್ರಮುಖ ಗಣರಾಜ್ ಭಟ್, ಮತಾಂದರ ಪಿತೂರಿಗಳ ಬಗ್ಗೆ ಹಿಂದೂ ಸಮಾಜ ಜಾಗೃತಗೊಳ್ಳಬೇಕೆಂದು ಕರೆ ನೀಡಿದರು.


ಹಿಂದೂ ಧರ್ಮ ಮತ್ತು ದೇಶಕ್ಕಾಗಿ ಕುಟ್ಟಪ್ಪರವರು ಬಲಿದಾನಗೈದಿದ್ದಾರೆ. ಇಂದು ಸಮಾಜದಲ್ಲಿ ಲವ್ ಜಿಹಾದ್ ಪಿಡುಗು ಹೆಮ್ಮರವಾಗಿ ಬೆಳೆಯುತ್ತಿದೆ. ಅಮಾಯಕ ಹಿಂದೂ ಯುವತಿಯರು ಈ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದು, ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಇಂದು ಗೋವುಗಳ ಹತ್ಯೆಯಾಗುತ್ತಿದೆ. ಗೋಮಾಳಗಳ ಸಂರಕ್ಷಣೆಗೆ ಆಡಳಿತ ವ್ಯವಸ್ಥೆ ಕಾಳಜಿ ತೋರುತ್ತಿಲ್ಲ ಎಂದು ಆರೋಪಿಸಿದರು.


ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಚಾಲಕ ಕುಕ್ಕೇರ ಅಜಿತ್, ಪ್ರಮುಖರಾದ ಮಹೇಶ್ ಕಡಗದಾಳು, ಚೀನಾ ಸೋಮೇಶ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net