

ಮಡಿಕೇರಿ:
2015 ನ. 10 ರಂದು ಟಿಪ್ಪು ಜಯಂತಿ ಸಂದರ್ಭ ನಡೆದ ಗಲಭೆಯಲ್ಲಿ ಮೃತಪಟ್ಟ ವಿಶ್ವ ಹಿಂದು ಪರಿಷತ್ ಮುಖಂಡÀ ದೇವಪ್ಪಂಡ ಕುಟ್ಟಪ್ಪ ಸಂಸ್ಮರಣೆ ಕಾರ್ಯಕ್ರಮ ಭಾನುವಾರ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ನಡೆಯಿತು. ಹಿಂದು ಜಾಗರಣ ವೇದಿಕೆ ಮತ್ತು ವಿವಿಧ ಹಿಂದುಪರ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲೆಯ ಮಡಿಕೇರಿ, ಕುಶಾಲನಗರ, ಮಾದಾಪುರ, ಅಮ್ಮತ್ತಿ, ಪೊನ್ನಂಪೇಟೆಗಳಲ್ಲಿ ಸಂಸ್ಮರಣಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಹಿಂದು ಜಾಗರಣ ವೇದಿಕೆ, ವಿ.ಹೆಚ್.ಪಿ., ಬಿಜೆಪಿ ಸೇರಿದಂತೆ ವಿವಿಧ ಹಿಂದುಪರ ಸಂಘಟನೆಗಳ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಾದಾಪುರದಲ್ಲಿ ನಡೆದ ಶಾಂತಿಪೂಜಾ ಕಾರ್ಯಕ್ರಮದಲ್ಲಿ ದೇವಪ್ಪಂಡ ಕುಟ್ಟಪ್ಪ ಅವರ ಕುಟುಂಬಸ್ಥರು, ಪ್ರಮುಖರಾದ ಶಾಂತೆಯAಡ ರವಿ ಕುಶಾಲಪ್ಪ, ಚಿ.ನಾ. ಸೋಮೇಶ್, ರಮೇಶ್ ಹೊಳ್ಳ, ಜಗದೀಶ್ ಸೋಮಯಾಜಿ, ಕುಕ್ಕೆರ ಅಜಿತ್, ಚೇತನ್ ಶಾಂತಿನಿಕೇತನ, ಶರತ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಕುಶಾಲನಗರ ಶ್ರೀ ಗಣಪತಿ ದೇವಾಲಯ, ಹಿಂ.ಜಾ.ವೇ. ಕಾರ್ಯಾಲಯ ಅಮ್ಮತ್ತಿ, ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯ ಹಾಗೂ ಪೊನ್ನಂಪೇಟೆ ಬಸವೇಶ್ವರ ದೇವಾಲಯದಲ್ಲಿ ಸಂಸ್ಮರಣಾ ಕಾರ್ಯಕ್ರಮಗಳು ನ