ಮಂಚಳ್ಳಿ ಹೊಳೆಯಲ್ಲಿ ತೇಲಿ ಬಂದ ಕಾಡಾನೆ ಮರಿ

IMG-20220810-WA0083
Published on

ಮಡಿಕೇರಿ: ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಮಂಚಳ್ಳಿ ಗ್ರಾಮದಲ್ಲಿ ಬುಧವಾರ ಕಾಡಾನೆ ಮರಿಯೊಂದಿಗೆ ಹೊಳೆಯಲ್ಲಿ ತೇಲಿ ಬಂತು. ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೋಡುಮಾಡ ರಾಜ ತಿಮ್ಮಯ್ಯ ಅವರ ತೋಟದ ಸಮೀಪದ ಹೊಳೆಯಲ್ಲಿ ಆನೆ ಮರಿ ತೇಲಿ ಬಂತು.

ಮೈದುಂಬಿ ಹರಿಯುತ್ತಿದ್ದ ಹೊಳೆಯಲ್ಲಿ ತೇಲಿ ಬರುತ್ತಿದ್ದ ಕಾಡಾನೆ ಮರಿಯನ್ನು ಸ್ಥಳೀಯರು ರಕ್ಷಿಸಿದರು. ತದನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡುವುದರ ಮೂಲಕ ಆನೆ ಮರಿ ರಕ್ಷಿಸಿದರು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸಮೀಪದಲ್ಲಿರುವ ಗ್ರಾಮದಲ್ಲಿ ಕಾಡಾನೆ ಮರಿ ತೇಲಿ ಬಂದಿತ್ತು.

ಬೆಳೆಗಾರರು, ಕಾರ್ಮಿಕರು ಬಹಳ ಕುತೂಹಲದಿಂದ ಹೊಳೆಯಲ್ಲಿ ತೇಲಿ ಬಂದ ಮರಿಯಾನೆಯನ್ನು ಪ್ರೀತಿಯಿಂದ ಮುದ್ದಾಡಿದರು. ಹಲವರು ಮರಿಯಾನೆ ಹತ್ತಿರ ನಿಂತು ಫೋಟೋ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net