

ಮಡಿಕೇರಿ:
ಮೈಸೂರು ದಸರಾ ಪ್ರಯುಕ್ತ ಮೈಸೂರಿನ ಕಲಾಮಂದಿರದಲ್ಲಿ ಮಂಗಳವಾರ ನಡೆದ ದಸರಾ ಕವಿಗೋಷ್ಠಿಯ ಚುಟುಕು ಕವನಗಳ ಗೋಷ್ಠಿಯಲ್ಲಿ ಕೊಡಗಿನ ಮಕ್ಕಳ ತಜ್ಞ ಮೇ. ಡಾ ಕುಶ್ವಂತ್ ಕೋಳಿಬೈಲು ತಮ್ಮ ಹನಿಗವನಗಳನ್ನು ಓದಿ ಕೇಳುಗರನ್ನು ರಂಜಿಸಿದರು. ನಂತರ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಇದಕ್ಕೂ ಮೊದಲು ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಕಾರ್ಯಕ್ರಮ ಉದ್ಘಾಟಿಸಿದರು. ಮೈಸೂರು ಉಸ್ತುವಾರಿ ಸಚಿವ ಹೆಚ್. ಸಿ. ಮಹಾದೇವಪ್ಪ, ಸಾಹಿತಿಗಳಾದ ಕುಂ. ವೀರಭದ್ರಪ್ಪ, ಮಾಲತಿ ಪಟ್ಟಣಶೆಟ್ಟಿ ಮತ್ತಿತರರು ಇದ್ದರು.