ಹುಬ್ಬಳ್ಳಿಯ ಆರು ಶಾಲೆಗಳಿಗೆ ‘ಕುಸುಮಾ ಅಕಾಡೆಮಿಕ್ ಎಕ್ಸ್‌ಲೆನ್ಸ್ ಅವಾರ್ಡ್’

h25-kusuma
Published on

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಅನುದಾನ ರಹಿತ ಆಡಳಿತ ಮಂಡಳಿಗಳ ಸಂಘದ ವತಿಯಿಂದ ಬೆಂಗಳೂರಿನಲ್ಲಿ ಇತ್ತೀಚೆಗೆ ಹುಬ್ಬಳ್ಳಿಯ ಪ್ರತಿಷ್ಠಿತ ಆರು ಶಾಲೆಗಳಿಗೆ ‘ಕುಸುಮಾ ಅಕಾಡೆಮಿಕ್ ಎಕ್ಸ್‌ಲೆನ್ಸ್ ಅವಾರ್ಡ್’ ಕೊಡಲಾಯಿತು.
ಲಯನ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಧ್ಯಕ್ಷ ಜಯಪ್ರಕಾಶ ಟೆಂಗಿನಕಾಯಿ, ಶ್ರೀ ಮಹಾವೀರ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಧ್ಯಕ್ಷ ಪ್ರೊ.ಎಸ್.ಕೆ. ಆದಪ್ಪನವರ, ಜೈಂಟ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಧ್ಯಕ್ಷ ಪರಶುರಾಮ ಊಟವಾಲೆ, ಪಿಳ್ಳೆ ಇಂಗ್ಷಿಷ್ ಮೀಡಿಯಂ ಸ್ಕೂಲ್ ಅಧ್ಯಕ್ಷ ಈಶ್ವರಲಾಲ ಲದ್ದಡ, ಚಿನ್ಮಯ ಇಂಗ್ಷಿಷ್ ಮೀಡಿಯಂ ಸ್ಕೂಲ್ ಆಡಳಿತಾಧಿಕಾರಿ ವಿಶ್ವನಾಥ ರಾನಡೆ, ದೇವಕಿ ಇಂಗ್ಷಿಷ್ ಮೀಡಿಯಂ ಸ್ಕೂಲ್ ಅಧ್ಯಕ್ಷ ಸಿದ್ದು ಗೌಡ ಅವರಿಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಅವರು ಅವಾರ್ಡ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net