ಉಣಕಲ್ಲನಲ್ಲಿ ಕುಸ್ತಿ ಸಂಭ್ರಮ

IMG-20240414-WA0007.jpg
Published on

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಜಾತ್ರೆ ಅಂಗವಾಗಿ ಏರ್ಪಡಿಸಿದ್ದ ಜಂಗಿ ಕಾಟಾ ನಿಕಾಲಿ ಕುಸ್ತಿ ಸ್ಪರ್ಧೆಗಳು ಜನಮನ ಸೆಳೆಯಿತು.

ಮಹಾನಗರದ ಮಧ್ಯದಲ್ಲಿ ಆಯೋಜಿಸಿದ್ದ ಕುಸ್ತಿ ಸ್ಪರ್ಧೆಯಲ್ಲಿ ಹಲವು ಪೈಲ್ವಾನರು ಪಾಲ್ಗೊಂಡು ಬಲ ಪ್ರದಶಿರ್ಸಿದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಅಲ್ಲದೇ ಜಿಲ್ಲೆಯ ಬೇರೆ ಕಡೆಯ ಪೈಲ್ವಾನರು ಕುಸ್ತಿ ಕಣದಲ್ಲಿ ತಮ್ಮ ಪೇಚು, ಡಾವ್ಗಳನ್ನು ಪ್ರದಶಿರ್ಸಿ ಎದುರಾಳಿಯನ್ನು ಮಣಿಸಲು ಪ್ರಯತ್ನಿಸಿದರು. ಕ್ರೀಡಾಪ್ರೇಮಿಗಳು ಕುಸ್ತಿ ಆಟಗಳನ್ನು ಸಂಭ್ರಮಿಸಿದರು.

ಸ್ಪರ್ಧೆಯಲ್ಲಿ ರೋಶನ್ ಮಾಸೂರ ಮೊದಲ ಬಹುಮಾನ ಪಡೆದರು. 15 ಸಾವಿರ ರೂ. ನಗದು, ಬೆಳ್ಳಿ ಗದೆಯನ್ನು ನೀಡಲಾಯಿತು.

ನಾಗರಾಜ ತಡಸಿನಕೊಪ್ಪ ಹಾಗೂ ಗಿರೀಶ ದಾವಣಗೆರೆ, ಸದಾನಂದ ಉಣಕಲ್ಲ ಹಾಗೂ ಶಶಾಂಕ ತಡಸಿನಕೊಪ್ಪ ಅವರು ಎರಡು ಪಂದ್ಯ ಡ್ರಾ ಆದವು. ನಾಲ್ಕನೇ ಬಹುಮಾನ ಧ್ರುವ ಉಣಕಲ್ಲ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net