ಸಾಲ ಮಾಡಿ ಜೀವಿಸಬೇಕೆ..?

protesting wearing black belts
ಕುಷ್ಟಗಿ ತಾಪಂ ಸಾಮರ್ಥ್ಯ ಸೌಧದ ಎದುರು ನರೇಗಾ ಯೋಜನೆಯಡಿ ಹೊರಸಂಪನ್ಮೂಲ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರ ಬಾಕಿ ವೇತನ ಪಾವತಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಪ್ರಮುಖರಾದ ಜಿ.ಚಂದ್ರಶೇಖರ, ಕೆ.ಬಸವರಾಜ, ಟಿ.ಬಸವರಾಜ, ಎಂ.ಮಲ್ಲಿಕಾರ್ಜುನ ಇತರರಿದ್ದರು.
Published on

ಕುಷ್ಟಗಿ: ಬಾಕಿ ವೇತನ ಪಾವತಿಸುವುದು ಸೇರಿ ಆರೋಗ್ಯ ವಿಮೆ, ಸೇವಾ ಭದ್ರತೆಗೆ ಆಗ್ರಹಿಸಿ ನರೇಗಾ ಯೋಜನೆಯಡಿ ಹೊರಸಂಪನ್ಮೂಲ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ವಿವಿಧ ನೌಕರರು ರಾಜ್ಯ ಮಹಾತ್ಮಾ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಮಂಗಳವಾರ ಪಟ್ಟಣದ ತಾಪಂ ಕಚೇರಿ ಸಾಮರ್ಥ್ಯ ಸೌಧದ ಎದುರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ಜಿಪಂ ಹಾಗೂ ತಾಪಂ ಮಟ್ಟದ ವಿವಿಧ ಸ್ಥರಗಳಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತ ನರೇಗಾ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಶ್ರಮಿಸುತ್ತಿದ್ದೇವೆ. ಜನವರಿ ತಿಂಗಳಿನಿಂದ ವೇತನ ಪಾವತಿಯಾಗದೇ ಕುಟುಂಬ ನಿರ್ವಹಣೆ ಕಷ್ಟವಾಗಿದೆ. 6 ತಿಂಗಳು ವೇತನವಿಲ್ಲದೇ ಸಾಲ ಮಾಡಿ ಜೀವನ ನಡೆಸುವಂತಾಗಿದೆ. ವೇತನ ವಿಳಂಬಕ್ಕೆ ಅನುದಾನ ಕೊರತೆಯೇ ಕಾರಣ ಎಂದು ಹೇಳಲಾಗುತ್ತಿದೆ. ಸದ್ಯ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಅನುದಾನ ಬಿಡುಗಡೆಯಾಗಿ ಜಿಲ್ಲಾ ಕೇಂದ್ರಗಳಿಗೂ ಹಂಚಿಕೆಯಾಗಿದೆ ಎಂಬ ಮಾಹಿತಿ ತಿಳಿದಿದೆ. ಕೂಡಲೇ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಕರ್ತವ್ಯದಿಂದ ಹೊರಗುಳಿದು ಅಸಹಕಾರ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂಘದ ತಾಲೂಕು ಘಟಕದ ಪದಾಧಿಕಾರಿಗಳಾದ ಜಿ.ಚಂದ್ರಶೇಖರ, ಕೆ.ಬಸವರಾಜ, ಟಿ.ಬಸವರಾಜ, ಎಂ.ಮಲ್ಲಿಕಾರ್ಜುನ, ಹಜರತ್, ಮುರುಳಿ, ಗ್ಯಾನಪ್ಪ, ವೀರಭದ್ರಗೌಡ, ಹನುಮಯ್ಯ, ವಿಜಯ ಮಹಾಂತೇಶ, ವೀಣಾ ಅಂಗಡಿ, ಸ್ವಪ್ನಾ ಶಾಂತಾ, ನಂದಿನಿ, ಲಕ್ಷ್ಮೀದೇವಿ, ಆಕಾಶ, ರಮೇಶ, ಶಿವಕುಮಾರ, ದೊಡ್ಡಬಸಯ್ಯ, ಸಂತೋಷ, ಭೀಮಪ್ಪ, ಸಿದ್ದಯ್ಯ, ಶಶಿಧರ, ಸಿದ್ದಲಿಂಗೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net