ಮಳೆಗೆ ಜನಜೀವನ ಅಸ್ತವ್ಯಸ್ತ

Rain
Published on


ಕುಷ್ಟಗಿ: ಪಟ್ಟಣದಲ್ಲಿ ಶನಿವಾರ ಒಂದು ತಾಸಿಗೂ ಹೆಚ್ಚು ಹೊತ್ತು ಸುರಿದ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಜಿಟಿಜಿಟಿಯಾಗಿ ಶುರುವಾದ ಮಳೆ ಕ್ರಮೇಣ ಧಾರಾಕಾರ ಸುರಿಯಿತು. ಮಳೆಯಿಂದಾಗಿ ವಾತಾವರಣ ತಂಪಾಗಿದ್ದು ಚಳಿ ಹೆಚ್ಚಿಸಿದೆ.

ವಿದ್ಯಾರ್ಥಿಗಳು ಮಳೆಯಲ್ಲೇ ನೆನೆದು ಶಾಲಾ, ಕಾಲೇಜಿಗೆ ತೆರಳಿದರು. ಬೀದಿ ಬದಿ ವ್ಯಾಪಾರಿಗಳ ವ್ಯಾಪಾರಕ್ಕೆ ತೊಂದರೆಯಾಯಿತು. ಮಳೆ ನೀರಿನ ಜತೆಗೆ ಚರಂಡಿಯ ತ್ಯಾಜ್ಯ ರಸ್ತೆ ಮೇಲೆ ಹರಿಯಿತು. ಪಟ್ಟಣದ ಮಾರುತಿ ವೃತ್ತ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಎಲ್ಲೆಲ್ಲೂ ತ್ಯಾಜ್ಯ ಮಡುಗಟ್ಟಿದ್ದು ಕಂಡುಬಂತು. ಬಹು ದಿನಗಳಿಂದ ಚರಂಡಿ ಹೂಳು ತೆಗೆಯದ ಹಿನ್ನೆಲೆಯಲ್ಲಿ ಮಳೆ ನೀರು ಚರಂಡಿ ಮೂಲಕ ಸರಾಗವಾಗಿ ಹರಿಯಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net