ದೇಗುಲ ಕಳ್ಳರ ಬಂಧನ; ಹುಂಡಿ ಹಣ, 1.58 ಲಕ್ಷ ರೂ. ಸಾಮಗ್ರಿ ವಶ

11082021 Kustagi thif arrest
Published on

ಕುಷ್ಟಗಿ: ದೇವಸ್ಥಾನದ ಹುಂಡಿ ಹಾಗೂ ಸಾಮಗ್ರಿಗಳನ್ನು ಕಳುವು ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ತಾವರಗೇರಾದ ವಿಠ್ಠಲ್ ಸಿಂಗ್, ಖಾಜಾಹುಸೇನ್ ಇಮಾಮ್‌ಸಾಬ್ ಸಿಂಧನೂರು, ಮಂಜುನಾಥ ಮುದುಕಪ್ಪ ಚಳ್ಳೂರು ಹಾಗೂ ನವಲಹಳ್ಳಿ ಗ್ರಾಮದ ರಂಗಪ್ಪ ಕನಕಪ್ಪ ತಳವಾರ್ ಬಂಧಿತರು. ಇವರಿಂದ 13 ಸಾವಿರ ರೂ. ಹುಂಡಿ ಹಣ ಹಾಗೂ ಹಿತ್ತಾಳೆಯ 28 ಗಂಟೆಗಳು, 4 ಸಮೇವು, 2 ಕಳಸ, ತಲಾ 1 ಪೂಜಾ ಕೊಡ, ಬೆಳ್ಳಿ ಮುಖ, ತಾಮ್ರದ ಹಿಡಿಕೆ ಸೇರಿದಂತೆ 1.58ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಹಾಗೂ ಕಳ್ಳತನಕ್ಕೆ ಬಳಕೆ ಮಾಡುತ್ತಿದ್ದ 2ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಾವರಗೇರಾದ ಶ್ಯಾಮೀದ್ ಅಲಿ ದರ್ಗಾ, ಕಾರಟಗಿಯ ತಾಯಮ್ಮ ದೇವಿ ಗುಡಿ ಹಾಗೂ ಯರಡೋಣಾದ ಬಸವಣ್ಣ ಗುಡಿಯ ಹುಂಡಿಯಲ್ಲಿದ್ದ ಹಣ ಮತ್ತು ಬಂಕಾಪುರದ ಹುಲಿಗೆಮ್ಮ ದೇವಸ್ಥಾನ, ಪುರದ ಬಸವಣ್ಣ ದೇವಸ್ಥಾನ, ಕನಕಗಿರಿಯ ಅಮೃತೇಶ್ವರ ದೇವಸ್ಥಾನ ಹಾಗೂ ಆರಾಳದ ರುದ್ರೇಶ್ವರ ದೇವಸ್ಥಾನದಲ್ಲಿ ಸಾಮಗ್ರಿ ಕಳುವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net