ಕುಷ್ಟಗಿ ತಹಸಿಲ್ ಕಚೇರಿಗೆ ಡಿಸಿ ಭೇಟಿ: ಗ್ರಾಮವಾಸ್ತವ್ಯದ ಮಾಹಿತಿ ಪಡೆದ ವಿಕಾಸ್ ಕಿಶೋರ್

14062022 Kustagi DC visit
Published on

ಕುಷ್ಟಗಿ: ಪಟ್ಟಣದ ತಹಸಿಲ್ ಕಚೇರಿಗೆ ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಮಂಗಳವಾರ ಭೇಟಿ ನೀಡಿ, ತಿಂಗಳ ಮೂರನೇ ಶನಿವಾರ ನಡೆಯುವ ಅಧಿಕಾರಿಗಳ ಗ್ರಾಮವಾಸ್ತವ್ಯಕ್ಕೆ ಸಂಬಂಧಿಸಿದ ತಯಾರಿ ಕುರಿತು ತಹಸೀಲ್ದಾರ್ ಎಂ.ಸಿದ್ದೇಶರಿಂದ ಮಾಹಿತಿ ಪಡೆದರು. ಈ ಬಾರಿ ತಾಲೂಕಿನ ತುಗ್ಗಲದೋಣಿಯಲ್ಲಿ ಗ್ರಾಮವಾಸ್ತವ್ಯ ನಡೆಯಲಿದೆ. ಕಾರ್ಯಕ್ರಮದ ಮಹತ್ವವನ್ನು ಗ್ರಾಮೀಣರಿಗೆ ತಿಳಿಸಿಕೊಡಬೇಕು. ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲು ಕ್ರಮ ಕೈಗೊಂಡು ಜನರು ಕಚೇರಿಗೆ ಅಲೆಯುವುದನ್ನು ತಪ್ಪಿಸಬೇಕು ಎಂದರು. ಗ್ರೇಡ್ 2ತಹಸೀಲ್ದಾರ್ ಮುರಳೀಧರ ಹಾಗೂ ಸಿಬ್ಬಂದಿ ಇದ್ದರು.

ಪರಿಶೀಲನೆ ಬಳಿಕ ವಿತರಣೆ: ತಾಲೂಕಿನಲ್ಲಿ ಕೋವಿಡ್‌ನಿಂದ ಮೃತಪಟ್ಟ 112 ಜನರ ಪೈಕಿ 42 ಕುಟುಂಬಗಳಿಗೆ ಮಾತ್ರ ಪರಿಹಾರ ವಿತರಿಸಲಾಗಿದೆ. ಬಾಕಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಡಿಸಿ ನೇತೃತ್ವದಲ್ಲಿ ಸಮಿತಿ ರಚಿಸಿ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ. ಇತರ ಕಾಯಲೆ ಜತೆಗೆ ಕರೊನಾ ಸೋಂಕಿನಿಂದಲೇ ಮೃತಪಟ್ಟ ಬಗ್ಗೆ ಸಮಿತಿ ದೃಢೀಕರಿಸಿ ನೀಡುವ ಪಟ್ಟಿ ಆಧರಿಸಿ ಪರಿಹಾರ ವಿತರಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಡಿಸಿ ಎಸ್.ವಿಕಾಸ್ ಕಿಶೋರ್ ಉತ್ತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net