ವೈಜ್ಞಾನಿಕ ಕುರಿ ಸಾಕಣೆಯಿಂದ ಆದಾಯ ದ್ವಿಗುಣ, ಹಿರಿಯ ಪಶು ವೈದ್ಯಾಧಿಕಾರಿ ಸಿದ್ದಲಿಂಗಯ್ಯ ಶಂಕೀನ್ ಹೇಳಿಕೆ

typhoid vaccination
ಕುಷ್ಟಗಿ ತಾಲೂಕಿನ ನೀರಲೂಟಿ ಗ್ರಾಮದಲ್ಲಿ ಪಶು ಪಾಲನಾ ಇಲಾಖೆಯಿಂದ ಕುರಿಗಳಿಗೆ ಜಂತುನಿವಾರಕ ಔಷಧ ಹಾಗೂ ಕರಳುಬೇನೆಗೆ ಹಿರಿಯ ಪಶು ವೈದ್ಯಾಧಿಕಾರಿ ಸಿದ್ದಲಿಂಗಯ್ಯ ಶಂಕೀನ್ ಲಸಿಕೆ ಹಾಕಿದರು. ಪಶು ಸಖಿ ಹುಲಿಗೆಮ್ಮ, ಪ್ರಮುಖರಾದ ಮಲ್ಲಿಕಾರ್ಜುನ ಅಗಸಿಮುಂದಿನ, ಶಂಕ್ರಪ್ಪ, ಗ್ಯಾನಪ್ಪ ಇದ್ದರು.
Published on

ಕುಷ್ಟಗಿ: ವೈಜ್ಞಾನಿಕ ಕುರಿ ಸಾಕಣೆಯಿಂದ ಆದಾಯ ದ್ವಿಗುಣಗೊಳ್ಳಲಿದೆ ಎಂದು ಹಿರಿಯ ಪಶು ವೈದ್ಯಾಧಿಕಾರಿ ಸಿದ್ದಲಿಂಗಯ್ಯ ಶಂಕೀನ್ ಹೇಳಿದರು.

ತಾಲೂಕಿನ ಹಿರೇಮನ್ನಾಪುರ ಹಾಗೂ ನೀರಲೂಟಿ ಗ್ರಾಮಗಳಲ್ಲಿ ಮಂಗಳವಾರ ಕುರಿಗಳಿಗೆ ಜಂತು ನಿವಾರಕ ಔಷಧ ಹಾಗೂ ಕರಳುಬೇನೆ ಲಸಿಕೆ ಹಾಕಿ ಮಾತನಾಡಿದರು.

ಕುರಿ, ಮೇಕೆ ಸಾಕಣೆ ಉದ್ಯಮವಾಗಿ ಮಾರ್ಪಟ್ಟಿದೆ. ಪದವೀಧರ ನಿರುದ್ಯೋಗಿಗಳು ಹಾಗೂ ಸರ್ಕಾರಿ ನೌಕರರು ಕುರಿ ಸಾಕಣೆಯತ್ತ ಒಲವು ತೋರುತ್ತಿದ್ದಾರೆ. ಆಧುನಿಕ ತಂತ್ರಜ್ಞಾನ, ಆಹಾರ ವಿಜ್ಞಾನ ಹಾಗೂ ತಳಿ ಅಭಿವೃದ್ಧಿ ವಿಧಾನ ಅರಿತು ಕುರಿ ಸಾಕಣೆ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು.

ಕಲುಷಿತ ನೀರಿನಿಂದ ಕುರಿಗಳಲ್ಲಿ ಜಂತುಹುಳು ಕಾಣಿಸಿಕೊಂಡು ಬೆಳವಣಿಗೆ ಕುಂಠಿತವಾಗುತ್ತದೆ. ಕರಳುಬೇನೆ ರೋಗ ತೀವ್ರ ಸ್ವರೂಪದ್ದಾಗಿದ್ದು, ರೋಗಪೀಡಿತ ಕುರಿಗಳು ಕೆಲವೇ ಗಂಟೆಗಳಲ್ಲಿ ಸಾಯುತ್ತವೆ. ಹೀಗಾಗದಂತೆ ತಡೆಗಟ್ಟಲು 2-3 ತಿಂಗಳಿಗೊಮ್ಮೆ ಜಂತು ನಿವಾರಕ ಔಷಧ ಹಾಗೂ 6 ತಿಂಗಳಿಗೆ ಒಮ್ಮೆ ಕರಳುಬೇನೆ ಲಸಿಕೆ ಹಾಕಿಸಬೇಕು ಎಂದರು.

ಪಶು ಪಾಲನೆ ಇಲಾಖೆ ಸಿಬ್ಬಂದಿ ಪ್ರವೀಣ ಬಾಳಿಗಿಡದ್, ವೀರೇಶ ರಾಂಪುರ, ಪಶು ಸಖಿ ಹುಲಿಗೆಮ್ಮ, ಪ್ರಮುಖರಾದ ಮಲ್ಲಿಕಾರ್ಜುನ ಅಗಸಿಮುಂದಿನ, ಶಂಕ್ರಪ್ಪ, ಗ್ಯಾನಪ್ಪ, ರಾಮಣ್ಣ, ಬಾಳಪ್ಪ ಚಳ್ಳಾರಿ, ಹನುಮಂತಪ್ಪ ಚಳ್ಳಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net