ಎಂಆರ್‌ಪಿಗಿಂತ ಹೆಚ್ಚಿಗೆ ಮಾರಾಟ ಮಾಡದಿರಲು ಔಷಧ ವ್ಯಾಪಾರಿಗಳಿಗೆ ಅಧಿಕಾರಿ ಸೂಚನೆ

20032020 Kustagi Medical Shop
Published on

ಕುಷ್ಟಗಿ: ಜಿಲ್ಲಾ ಔಷಧ ನಿಯಂತ್ರಣಾಧಿಕಾರಿ, ಆಹಾರ ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಕಾರಿಗಳು ಶುಕ್ರವಾರ ಪಟ್ಟಣ ಹಾಗೂ ತಾಲೂಕಿನ ವಿವಿಧ ಔಷಧ ಅಂಗಡಿಗಳಿಗೆ ಭೇಟಿ ನೀಡಿ, ಮಾಸ್ಕ್ ಇನ್ನಿತರ ಔಷಧ ಲಭ್ಯತೆ ಪರಿಶೀಲಿಸಿದರು.

ಮಾಸ್ಕ್‌ಗಳು ಹಾಗೂ ಅಗತ್ಯ ಔಷಧ ದಾಸ್ತಾನು ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಬೇಕು. ಎಂಆರ್‌ಪಿಗಿಂತ ಹೆಚ್ಚಿಗೆ ಮಾರಾಟ ಮಾಡುವಂತಿಲ್ಲ. ಸಾರ್ವಜನಿಕ ಸೇವೆಯ ದೃಷ್ಟಿಯಿಂದ ರಿಯಾಯಿತಿ ದರದಲ್ಲಿ ಮಾರಾಟ ಮಾಡುವಂತೆ ಸೂಚನೆ ನೀಡಿದರು.

ಆಹಾರ ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಜಿಲ್ಲಾ ಔಷಧ ನಿಯಂತ್ರಣಾಧಿಕಾರಿ ವೆಂಕಟೇಶ ರಾಠೋಡ, ತಹಸೀಲ್ದಾರ್ ಎಂ.ಸಿದ್ದೇಶ ಪರಿಶೀಲನೆ ಕೈಗೊಂಡರು. ಔಷಧ ವರ್ತಕರ ಸಂಘದ ಅಧ್ಯಕ್ಷ ಬಸವರಾಜ ಕುಡತಿನಿ, ವರ್ತಕರಾದ ಶಾಂತಯ್ಯ ಗಣಾಚಾರಿ, ಸಂಗನಗೌಡ ಪಾಟೀಲ್, ಶಾಂತೇಶ ಕಂಪಾಪುರಮಠ, ಮುತ್ತಣ್ಣ ಗೋತಗಿ, ಶಿವಕುಮಾರ, ಪ್ರಹ್ಲಾದ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net