ಕೊಚ್ಚಿ ಹೋಗುತ್ತಿದ್ದ ವಿದ್ಯಾರ್ಥಿಯ ರಕ್ಷಣೆ

protection of the student
ಕುಷ್ಟಗಿ ತಾಲೂಕಿನ ಕುರುಬನಾಳ-ನೆರೆಬೆಂಚಿ ರಸ್ತೆ ಮೇಲೆ ಹರಿಯುತ್ತಿರುವ ಹಳ್ಳದ ದೃಶ್ಯ.
Published on

ಕುಷ್ಟಗಿ: ತಾಲೂಕಿನ ಕುರುಬನಾಳ-ನೆರೆಬೆಂಚಿ ರಸ್ತೆ ಮಧ್ಯೆ ಹರಿಯುತ್ತಿದ್ದ ಹಳ್ಳದ ನೀರಿಗೆ ಕೊಚ್ಚಿ ಹೋಗುತ್ತಿದ್ದ ವಿದ್ಯಾರ್ಥಿಯನ್ನು ರಕ್ಷಿಸಿದ ಘಟನೆ ಗುರುವಾರ ನಡೆದಿದೆ.

ಶಾಲೆ ಮುಗಿಸಿಕೊಂಡು ಸೈಕಲ್ ಮೇಲೆ ತೆರಳುತ್ತಿದ್ದ ವಿದ್ಯಾರ್ಥಿಗಳ ಪೈಕಿ ಕುರುಬನಾಳ ಗ್ರಾಮದ ರವಿ ತುಮರಗುದ್ದಿ ಎಂಬ ವಿದ್ಯಾರ್ಥಿ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದಾಗ ನೆರೆಬೆಂಚಿ ಗ್ರಾಮದ ಮಂಜುನಾಥ ಕುರಿಯವರ ಎಂಬುವವರು ರಕ್ಷಣೆ ಮಾಡಿದ್ದಾರೆ. ಗುರುವಾರ ಸುರಿದ ಭಾರಿ ಮಳೆಗೆ ಹಳ್ಳ ತುಂಬಿ ಹರಿಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net