ವಸತಿ ನಿಲಯಕ್ಕೆ ಶಾಸಕ ಬಯ್ಯಪುರ ಭೇಟಿ

09022020 Kustagi MLA visit to hostel
Published on

ಕುಷ್ಟಗಿ: ವಸತಿ ನಿಲಯದ ವಿದ್ಯಾರ್ಥಿಗಳು ಸರ್ಕಾರ ನೀಡುವ ಸೌಲಭ್ಯಗಳ ಸದುಪಯೋಗ ಪಡೆದು ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಬೇಕು ಎಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಪುರ ಹೇಳಿದರು.

ಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ನಡೆಯುತ್ತಿರುವ ವಿಶೇಷ ಬೋಧನಾ ಶಿಬಿರಕ್ಕೆ ಭಾನುವಾರ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಸತಿ ನಿಲಯಗಳಲ್ಲಿ ಪದವೀಧರರೇ ಮೇಲ್ವಿಚಾರಕರು ಇರುವುದರಿಂದ ಅವರೂ ಸಹ ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಬೋಧಿಸಬೇಕು. ಇಂತಹ ಶಿಬಿರಗಳಿಗೆ ಗೈರಾಗದೆ ವಿದ್ಯಾರ್ಥಿಗಳು ಸದುಪಯೋಗ ಪಡೆಯಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ದೇವಲ್ ನಾಯಕ್, ಮೇಲ್ವಿಚಾರಕರಾದ ದ್ಯಾಮಣ್ಣ ಕರಕಲ್, ಸುರೇಶ ಪಾಟೀಲ್, ಬಸವರಾಜ ಚಳಗೇರಿ, ಮೀನಾಕ್ಷಿ ಜೋಶಿ, ಮಲ್ಲಿಕಾರ್ಜುನ ಬಿರಾದಾರ್ ಇದ್ದರು. ಪಟ್ಟಣದ ಬಾಲಕರ, ಬಾಲಕಿಯರ ವಸತಿ ನಿಲಯ ಸೇರಿ ತಾಲೂಕಿನ ಹನುಮಸಾಗರ, ಮಾಲಗಿತ್ತಿ, ಕಬ್ಬರಗಿ ಹಾಗೂ ದೋಟಿಹಾಳ ವಸತಿ ನಿಲಯದ 176 ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

ವ್ಯವಸ್ಥೆ ಪರಿಶೀಲಿಸಿದ ಶಾಸಕ: ವಸತಿ ನಿಲಯದ ಅಡುಗೆ ಕೋಣೆ ಪರಿಶೀಲಿಸಿದ ಶಾಸಕ ಬಯ್ಯಪುರ, ಸ್ವಚ್ಛತೆ ಕಾಪಾಡುವಂತೆ ನಿಲಯದ ಮೇಲ್ವಿಚಾರಕರಿಗೆ ಸೂಚಿಸಿದರು. ಸ್ವಚ್ಛತೆ ಇಲ್ಲದಿರುವುದರಿಂದಲೇ ಕರೋನಾದಂಥ ಭಯಾನಕ ವೈರಸ್‌ಗಳು ದಾಳಿ ನಡೆಸುತ್ತಿವೆ. ಮುಂಜಾಗೃತೆ ವಹಸಿ ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿ ಬುದ್ದಿ ಮಟ್ಟ ಪರೀಕ್ಷಿಸಿದ್ದಲ್ಲದೆ ಶಾಸಕ ಬಯ್ಯಪುರ ವಸತಿ ನಿಲಯದಲ್ಲಿ ತಯಾರಿಸಿದ ಊಟ ಸವಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net