ಕ್ರಿಮಿನಾಶಕ ಸಿಂಪಡಿಸಿ ಸರಿಯಾಗಿ ಕೈತೊಳೆಯದೆ ಊಟ ಮಾಡಿದ ರೈತ ಸಾವು; ಕಲಕೇರಿ ಗ್ರಾಮದಲ್ಲಿ ಘಟನೆ

30082022 Commits Suicide Web - Copy
Published on

ಕುಷ್ಟಗಿ: ತಾಲೂಕಿನ ಕಲಕೇರಿ ಗ್ರಾಮದಲ್ಲಿ ಬೆಳೆಗೆ ಕ್ರಿಮಿನಾಶಕ ಸಿಂಪಡಿಸಿ ಸರಿಯಾಗಿ ಕೈತೊಳೆಯದೆ ಊಟ ಮಾಡಿದ್ದರಿಂದ ಅಸ್ವಸ್ಥಗೊಂಡು ರೈತ ಸೋಮವಾರ ಮೃತಪಟ್ಟಿದ್ದಾರೆ. ನಾಗಪ್ಪ ಯಂಕಪ್ಪ ತೋಪಲಕಟ್ಟಿ(46) ಮೃತ. ಅಸ್ವಸ್ಥಗೊಂಡ ಪತಿಯನ್ನು ದೋಟಿಹಾಳ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಾಗ ಕೊನೆಯುಸಿರೆಳೆದ ಎಂದು ಮೃತನ ಪತ್ನಿ ದೇವಮ್ಮ ನೀಡಿದ ದೂರಿನನ್ವಯ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net