ಗೌರವ ಧನ ಹೆಚ್ಚಿಸಲು ಒತ್ತಾಯ

19052020 Kustagi Teacher appeal
Published on

ಕುಷ್ಟಗಿ: ಗೌರವಧನ ಹೆಚ್ಚಿಸುವುದು ಸೇರಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ತಾತ್ಕಾಲಿಕ ಪರಿಹಾರ ಧನ ನೀಡುವಂತೆ ಒತ್ತಾಯಿಸಿ ತಾಲೂಕಿನ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಅತಿಥಿ ಶಿಕ್ಷಕರು, ಶಿಕ್ಷಣ ಸಚಿವ ಸುರೇಶಕುಮಾರ್‌ಗೆ ಬರೆದ ಪತ್ರವನ್ನು ಶಿರಸ್ತೇದಾರ್ ರಜನಿಕಾಂತ್‌ಗೆ ಮಂಗಳವಾರ ಸಲ್ಲಿಸಿದರು.

ಸದ್ಯ ನೀಡಲಾಗುತ್ತಿರುವ ಗೌರವ ಧನ ಹೆಚ್ಚಿಸಬೇಕು. ಸೇವಾ ಭದ್ರತೆಯ ಜತೆಗೆ ಇಎಸ್‌ಐ, ಪಿಎಫ್‌ನಂತಹ ಸೌಲಭ್ಯ ನೀಡಬೇಕು. ಲಾಕ್‌ಡೌನ್ ಹಿನ್ನೆಲೆಯಲ್ಲಿ ವಿವಿಧ ಕಾರ್ಮಿಕರು ಹಾಗೂ ರೈತರಿಗೆ ನೀಡಿದಂತೆ ಅತಿಥಿ ಶಿಕ್ಷಕರಿಗೂ ಪರಿಹಾರ ಧನ ನೀಡಬೇಕು ಎಂದು ಆಗ್ರಹಿಸಿದರು. ಅತಿಥಿ ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷ ಶ್ರೀಕಾಂತ ಕಿರಗಿ, ಸದಸ್ಯರಾದ ಬಸವರಾಜ ಗುಡಿ, ಮುದಿಯಪ್ಪ, ಮಾನಪ್ಪ, ಸಂಗಪ್ಪ, ಹನುಮಂತಪ್ಪ, ನಹೀಮ್ ಖಾನ್, ಕೆ.ಶಾಂತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net