ಅಂಗವಿಕಲರು ಕಡ್ಡಾಯ ಹಕ್ಕು ಚಲಾಯಿಸಲಿ

SWAGATHA
ಕುಷ್ಟಗಿ ತಾಪಂ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ವಿಶೇಷಚೇತನರ ಕಾರ್ಯಕರ್ತ ಆದಪ್ಪ ಮಾಲಿಪಾಟೀಲ್‌ಗೆ ತಾಪಂ ಇಒ ನಿಂಗಪ್ಪ ಮಸಳಿ ಹೂ ನೀಡಿ ಅಂಗವಿಕಲರ ಮತದಾನ ಪ್ರಮಾಣ ಹೆಚ್ಚಳಕ್ಕೆ ಶ್ರಮಿಸುವಂತೆ ಸೂಚಿಸಿದರು. ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ, ಸಿಡಿಪಿಒ ಯಲ್ಲಮ್ಮ ಹಂಡಿ ಇದ್ದರು.
Published on

ಕುಷ್ಟಗಿ: ಅಂಗವಿಕಲರು ಮತದಾನದಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಿ ಎಂದು ತಾಪಂ ಇಒ ನಿಂಗಪ್ಪ ಮಸಳಿ ಹೇಳಿದರು. ಪಟ್ಟಣದ ತಾಪಂ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ವಿಶೇಷಚೇತನ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಶೇಕಡವಾರು ಮತದಾನ ಹೆಚ್ಚಿಸುವಲ್ಲಿ ಅಂಗವಿಕಲ ಕಾರ್ಯಕರ್ತರ ಪಾತ್ರ ಪ್ರಮುಖವಾಗಿದ್ದು, ಇವರಿಗಾಗಿ ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿದೆ. ಬೇಸಿಗೆ ಬಿಸಿಲಿನ ಪ್ರಖರತೆ ಹೆಚ್ಚಿರುವುದರಿಂದ ಬೆಳಗಿನ ಅವಧಿಯಲ್ಲಿ ಮತದಾನ ಮಾಡಲು ಸೂಚಿಸಬೇಕು.

ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಅಂಗವಿಕಲರ ಸಭೆ ಏರ್ಪಡಿಸಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಶ್ರಮಿಸುವಂತೆ ಮನವಿ ಮಾಡಿದರು. ನರೇಗಾ ಸಹಾಯಕ ನಿರ್ದೇಶಕ ನಿಂಗನಗೌಡ ಹಿರೇಹಾಳ, ಸಿಡಿಪಿಒ ಯಲ್ಲಮ್ಮ ಹಂಡಿ ತಾಪಂ ಸಿಬ್ಬಂದಿ ಸಂಗಪ್ಪ ನಂದಾಪುರ, ಚಂದ್ರಶೇಖರ ಹಿರೇಮಠ, ತಾಲೂಕು ವಿಶೇಷಚೇತನರ ಕಾರ್ಯಕರ್ತ ಚಂದ್ರಶೇಖರ ಹಿರೇಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net