

ಕುಷ್ಟಗಿ: ಪಟ್ಟಣದ ತಹಸಿಲ್ ಕಚೇರಿಯಲ್ಲಿ ತೆರೆಯಲಾಗಿರುವ ಕೋವಿಡ್-19 ಪರಿಹಾರ ಕೇಂದ್ರಕ್ಕೆ ಪಟ್ಟಣದ ಕಿರಾಣಿ ವರ್ತಕರು ಅಗತ್ಯ ದಿನಸಿ ವಸ್ತುಗಳಿರುವ 220 ಕಿಟ್‌ಗಳನ್ನು ಶುಕ್ರವಾರ ನೀಡಿದರು.
ಕರೊನಾ ಪರಿಣಾಮ ದೇಶವೇ ಸಂಕಷ್ಟ ಎದುರಿಸುತ್ತಿದೆ. ಈ ಸಂದರ್ಭ ಬಡ ಹಾಗೂ ಕೂಲಿ ಕಾರ್ಮಿಕರ ನಿತ್ಯದ ಜೀವನ ಕಷ್ಟಸಾಧ್ಯವಾಗುತ್ತಿದೆ. ಹೀಗಾಗಿ ಕಿರಾಣಿ ವರ್ತಕರು ಸೇರಿ ದಿನಸಿ ವಸ್ತುಗಳ ಕಿಟ್‌ಗಳನ್ನು ನೀಡುತ್ತಿದ್ದೇವೆಂದು ವರ್ತಕರು ಹೇಳಿದರು.
ವರ್ತಕರಾದ ಮೆಹಬೂಬಸಾಬ ನೆರೆಬೆಂಚಿ, ಅಂದನಗೌಡ ಪಾಟೀಲ್, ಚಂದ್ರಶೇಖರ ಓತಗೇರಿ, ಮುಸ್ತಫಾ ಮುಲ್ಲಾ, ಶರಣಪ್ಪ ತಲೇಖಾನ, ಹನುಮಂತಪ್ಪ ಇಲ್ಲೂರು, ಓಂಕಾರಪ್ಪ ಕಂದಕೂರು, ರಾಘು ಕೆಳಗಡೆ ಹಾಗೂ ಮಸ್ತಾಕ್ ತಿಳಿಸಿದರು. ಗ್ರೇಡ್ 2ತಹಸೀಲ್ದಾರ್ ವಿಜಯಾ ಮುಂಡರಗಿ, ಶಿರಸ್ತೇದಾರ್ ರಜನಿಕಾಂತ ಇದ್ದರು.